More

    ಕಾರ್ಮಿಕ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು – ಗುರುರಾಜ ಗೌರಿ

    ವಿಜಯವಾಣಿ ಸುದ್ದಿಜಾಲ ಗದಗ
    ಸಾಮಾಜಿಕ ಮತ್ತು ಆಥಿರ್ಕವಾಗಿ ದುರ್ಬಲ ಇರುವ ಜನರಿಗೆ ಕಾನೂನು ಸಲಹೆ ನೀಡಲು ಮತ್ತು ನ್ಯಾಯ ದೊರಕಿಸಲು ಕಾರ್ಮಿಕ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವಿದೆ. ಈ ಬಗ್ಗೆ ಕಾರ್ಮಿಕ ಅರಿವಿರಬೇಕು ಎಂದು ಕಾಮಿರ್ಕ ಇಲಾಖೆ ಕಾನೂನು ಸಲಹೆಗಾರ ಗುರುರಾಜ ಗೌರಿ ಹೇಳಿದರು.
    ಕಾಮಿರ್ಕ ಇಲಾಖೆ ಸಹಯೋಗದಲ್ಲಿ ವಾಣಿಜೋದ್ಯಮ ಸಂಸ್ಥೆಯಲ್ಲಿ ಗುರುವಾರ “ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ನೋಂದಣಿ ಅಭಿಯಾನ’ ಕುರಿತು ಜರುಗಿದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ಸಂಸ್ಥೆ ಮತ್ತು ಅಂಗಡಿ ನಡೆಸುವರ ಕಾನೂನಿ ಅಡಿಯಲ್ಲಿ ನೋಂದಣಿ ಕಡ್ಡಾಯ ಮಾಡಿಸಬೇಕು. ಇದರಿಂದ ಅವಡ ಸಂಭವಿಸಿದಲ್ಲಿ ಸರ್ಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಾಮಿರ್ಕರಿಗೆ ಮೂಲಭೂತ ಸೌಲಭ್ಯ, ಕನಿಷ್ಠ ವೇತನ ಸೇರಿದಂತೆ ಸಂಸ್ಥೆಗಳು ನ್ಯಾಯಬದ್ಧವಾಗಿ ಕಾರ್ಮಿಕರಿಗೆ ಸೇವೆ ಒದಗಿಸಬೇಕು ಎಂದರು.
    ಜಿಲ್ಲಾ ಕಾಮಿರ್ಕ ಅಧಿಕಾರಿ ಬಿ.ಆರ್​. ಜಾದವ ಮಾತನಾಡಿ, ಜಿಲ್ಲೆಯಲ್ಲಿ 10 ಸಾವಿರ ಜನರು ಪರವಾನಿಗೆ ಪಡೆದುಕೊಂಡಿದ್ದಾರೆ. ಸಣ್ಣ ಅಂಗಡಿ ಇದ್ದರೂ ಕೂಡಾ ಪರವಾನಿಗೆ ಅಗತ್ಯವಿದೆ. ಸಂಸ್ಥೆಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳಬಾರದು. 1961ರ ಕಾಯ್ದೆಯಡಿ ಕನಿಷ್ಠ ವೇತನ ಕಾಯ್ದೆ ಕಾಪಾಡಿಕೊಳ್ಳಬೇಕು ಎಂದರು ತಿಳಿಸಿದರು.
    ಸಂಸ್ಥೆಯ ಅಧ್ಯ ಮದುಸೂಧನ ಪುಣೇಕರ ಮಾತನಾಡಿ, ಸಂಸ್ಥೆಯಲ್ಲಿ ಅಧಿಕವಾರ ವಹಿಸಿಕೊಂಡು, ಲಿಂಗೈಕ್ಯರಾದ ಹಿರಿಯರ ನೆನಪಿನಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ಕಾಮಿರ್ಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಚಂದ್ರು ಬಾಳಿಹಳ್ಳಿಮಠ, ಈಶ್ವರಪ್ಪ ಮುನವಳ್ಳಿ, ಪ್ರಕಾಶ ಉಗಲಾಟದ, ಗಿರೀಶ ಬಂಕದಮನಿ, ಉಮೇಶ ಹುಲ್ಳಣ್ಣವರ, ಶರಣಬಸಪ್ಪ ಗುಡಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts