More

    ಡಿಸ್ಲೈಕ್​ನಲ್ಲಿ ‘ಸಡಕ್​ 2’ ಮೀರಿಸುತ್ತದಾ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಟ್ರೇಲರ್?

    ಆಲಿಯಾ ಭಟ್​ ಅಭಿನಯದ ‘ಸಡಕ್​ 2’ ಚಿತ್ರದ ಟ್ರೇಲರ್​ಗೆ ಜನ ಯಾವ ರೀತಿ ಡಿಸ್ಲೈಕ್​ ಒತ್ತುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜನ ಆ ಚಿತ್ರದ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾರೆ ಎಂದರೆ, ಭಾರತದಲ್ಲೇ ಅತೀ ಹೆಚ್ಚು ಡಿಸ್ಲೈಕ್​ ಪಡೆದ ಟ್ರೇಲರ್​​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮುಂದಿನ ದಿನಗಳಲ್ಲಿ ಆಮೀರ್​ ಖಾನ್​ ಅಭಿನಯದ ‘ಲಾಲ್​ ಸಿಂಗ್​ ಚಡ್ಡಾ’ ಸಹ ಇದೇ ದಾರಿಯಲ್ಲಿ ಮುಂದುವರೆಯುತ್ತದಾ? ಜನ ಈ ಚಿತ್ರದ ಟ್ರೇಲರ್​ಗೂ ಇದೇ ರೀತಿ ಆಕ್ರೋಶ ವ್ಯಕ್ತಪಡಿಸುತ್ತಾರಾ? ಎಂಬ ಪ್ರಶ್ನೆಯೊಂದು ಇದೀಗ ಎಲ್ಲರನ್ನೂ ಕಾಡುತ್ತಿದೆ.

    ಇದನ್ನೂ ಓದಿ: PHOTOS; ಹೊಸ ಫೋಟೋಶೂಟ್​ನಲ್ಲಿ ಮಾನ್ವಿತಾ ಮಿಂಚಿಂಗ್​…

    ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಚಿತ್ರೀರಣ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ, ಚಿತ್ರತಂಡವು ಟರ್ಕಿಯಲ್ಲಿ ಚಿತ್ರೀಕರಣ ಮಾಡುವುದಕ್ಕೆ ತೀರ್ಮಾನಿಸಿದೆ. ಅಕ್ಟೋಬರ್​ನಿಂದ ಚಿತ್ರೀಕರಣ ಮಾಡುವ ಯೋಚನೆ ಇದ್ದು, ಅದಕ್ಕೂ ಮುನ್ನ ಆಮೀರ್​ ಸೇರಿದಂತೆ ಚಿತ್ರತಂಡದ ಕೆಲವೇ ಮಂದಿ, ಟರ್ಕಿಗೆ ಶೂಟಿಂಗ್​ ಲೊಕೇಶನ್​ ಹುಡುಕುವುದಕ್ಕೆ ಹೋಗಿದ್ದಾರೆ.

    ಈ ಸಂದರ್ಭದಲ್ಲಿ ಟರ್ಕಿಯ ಮೊದಲ ಮಹಿಳೆ ಎಮೀನ್​ ಎರ್ಡೋಗನ್​ ಅವರನ್ನು ಇಸ್ತಾನ್​ಬುಲ್​ನಲ್ಲಿ ಆಮೀರ್​ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಹಲವರಿಗೆ ಅಸಮಾಧಾನವಿದೆ. ಕಾರಣ, ಭಾರತ ಮತ್ತು ಟರ್ಕಿಯ ನಡುವೆ ಸಂಬಂಧಗಳು ಅಷ್ಟು ಚೆನ್ನಾಗಿಲ್ಲ. ಕಳೆದ ವರ್ಷ ಕಾಶ್ಮೀರದಲ್ಲಿ ಆರ್ಟಿಕಲ್​ 370 ಹೇರಿದ ನಂತರ, ಟರ್ಕಿಯು ಪಾಕಿಸ್ತಾನದ ಪರ ವಹಿಸಿತ್ತು. ಇದರಿಂದ ಭಾರತ ಮತ್ತು ಟರ್ಕಿಯ ಸಂಬಂಧ ಕ್ಷೀಣಿಸಿತ್ತು.

    ಇದನ್ನೂ ಓದಿ: ಆರೋಪಗಳಿಗೆ ರಿಯಲ್​ ಗುಂಜನ್​ ಸಕ್ಸೇನಾ ಉತ್ತರ

    ಈಗ ಆಮೀರ್​ ಅದೇ ದೇಶಕ್ಕೆ ಚಿತ್ರೀಕರಣಕ್ಕೆ ಹೋಗುತ್ತಿರುವುದು ಮತ್ತು ಅಲ್ಲಿನ ಮೊದಲ ಮಹಿಳೆಯನ್ನು ಭೇಟಿ ಮಾಡಿರುವುದು ಹಲವರಿಗೆ ಕೋಪ ತರಿಸಿದೆ. ಈ ನಿಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ, ಈಗಾಗಲೇ ‘ಡಿಸ್ಲೈಕ್​ ಲಾಲ್​ ಸಿಂಗ್​ ಚಡ್ಡಾ’ ಎಂಬ ಅಭಿಯಾನ ಶುರುವಾಗಿದೆ. ಸದ್ಯ ಚಿತ್ರವು ಚಿತ್ರೀಕರಣ ಹಂತದಲ್ಲಿರುವುದರಿಂದ ಟ್ರೇಲರ್​ ಅಥವಾ ಟೀಸರ್​ ಬಿಡುಗಡೆಯನ್ನು ಚಿತ್ರತಂಡ ಯೋಚಿಸಿಲ್ಲ. ಈ ಚಿತ್ರದ ಟ್ರೇಲರ್​ ಬಿಡುಗಡೆ ಏನಿದ್ದರೂ ಮುಂದಿನ ವರ್ಷ ಇಷ್ಟು ಹೊತ್ತಿಗೆ ಆಗಬಹುದು.

    ಆದರೂ ಈಗಲೇ ಚಿತ್ರಕ್ಕೆ ಹೆಚ್ಚುಹೆಚ್ಚು ಡಿಸ್ಲೈಕ್​ಗಳು ಸಿಗುವಂತೆ ನೋಡಿಕೊಳ್ಳಿ ಎಂಬ ಅಭಿಯಾನ ಶುರುವಾಗಿದೆ. ‘ಸಡಕ್​ 2’ ಚಿತ್ರಕ್ಕೆ ಒಂದು ಕೋಟಿ ಡಿಸ್ಲೈಕ್​ ಸಿಕ್ಕರೆ, ‘ಲಾಲ್​ ಸಿಂಗ್​’ಗೆ ಕನಿಷ್ಠ ಹತ್ತು ಕೋಟಿಯಾದರೂ ಡಿಸ್ಲೈಕ್​ ಸಿಗಬೇಕು ಮತ್ತು ಎಲ್ಲಾ ದಾಖಲೆಗಳನ್ನು ಮುರಿಯಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

    ಪ್ರಿಯಾಂಕಾ ಚೋಪ್ರಾ ಖುಷಿಗೆ ಕಾರಣವೇನಿರಬಹುದು ಗೆಸ್​ ಮಾಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts