More

    ಅವು ಈಗಲೂ ಎದೆ ಝಲ್ ಅನಿಸುವಂಥ ಫೋಟೋಗಳು; ಪತ್ರಿಕಾ ಛಾಯಾಗ್ರಾಹಕ ಆಗಿಯೇ ಅರ್ಧ ಶತಕ ಪೂರೈಸಿದವರ ಅನಿಸಿಕೆ

    ಬೆಂಗಳೂರು: ಅರ್ಧ ಶತಮಾನ ಪೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ ಅಬ್ದುಲ್ ಹಫೀಜ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವೃತ್ತಿ ಗೌರವ ಸಮರ್ಪಣೆ ಮಾಡಿತು.
    ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮನದುಂಬಿ’ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
    ಕೆಯುಡಬ್ಲ್ಯೂಜೆ ಗೌರವ ಸ್ವಿಕರಿಸಿ ಮಾತನಾಡಿದ 84 ವಸಂತಗಳನ್ನು ಕಂಡಿರುವ ಹಫೀಜ್, ಪತ್ರಿಕಾ ವೃತ್ತಿ ಇಂದು ಎಷ್ಟೇ ಬದಲಾವಣೆ ಕಂಡಿದ್ದರೂ ಹಿಂದೆ ಮತ್ತು ಇಂದು ಕೂಡ ಪತ್ರಿಕಾ ಛಾಯಾಗ್ರಾಹಕರು ತಮ್ಮ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ ಎಂದರು.

    ತಾನು ಪತ್ರಿಕಾ ಛಾಯಾಗ್ರಾಹಣ ವೃತ್ತಿ ಆರಂಭಿಸಿದ ಸಮಯದಲ್ಲಿ ಸೈಕಲ್ ತುಳಿದುಕೊಂಡು ಬಹಳ ಕಷ್ಟಪಟ್ಟು ದೂರದ ಕಾರ್ಯಕ್ರಮಗಳಿಗೆ ಹೋಗಿ ಚಿತ್ರಗಳನ್ನು ತೆಗೆಯಲು ಹೋಗುತ್ತಿದ್ದೆ. ಛಾಯಾಗ್ರಾಹಕ ವೃತ್ತಿಗೆ ಸಂಬಂಧಪಟ್ಟ ಪರಿಕರಗಳನ್ನು ಕಚೇರಿಯಲ್ಲೇ ತಯಾರಿಸಬೇಕಾದ ಪರಿಸ್ಥಿತಿ ಇತ್ತು. ವೃತ್ತಿ ಬದ್ಧತೆ ಮೈಗೂಡಿಸಿಕೊಂಡಿದ್ದರಿಂದ ಎಲ್ಲೇ ಇದ್ದರೂ ಸಕಾಲದಲ್ಲಿ ಛಾಯಾಚಿತ್ರಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸಲು ಸಾಧ್ಯವಾಗಿತ್ತು ಎಂದರು.

    ದೂರದರ್ಶನದ ಉರ್ದು ಸುದ್ದಿ ಪ್ರಸಾರದ ವಿರುದ್ಧ ನಡೆದ ಪತ್ರಿಭಟನೆ, ಬೆಳಗಾವಿ ಗಡಿ ವಿವಾದ, ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ, ಬೆಂಗಳೂರಿನಲ್ಲಿ ನಡೆದ ವಿಮಾನ ದುರಂತ ಸೇರಿದಂತೆ ರಾಜ್ಯದಲ್ಲಿ ನಡೆದಿದ್ದ ಹಲವಾರು ನಿರ್ಣಾಯಕ ಸಂದರ್ಭದಲ್ಲಿ ಜೀವದ ಹಂಗು ತೊರೆದು ತೆಗೆದ ಪೋಟೋಗಳು ಈಗಲೂ ಎದೆ ಝಲ್ಲೆನಿಸುವಂತೆ ಮಾಡುವಂಥವು ಎಂದು ಹಳೆಯ ವೃತ್ತಿ ಜೀವನವನ್ನು ಅವರು ಸ್ಮರಿಸಿಕೊಂಡರು.

    ಹೋರಾಟದ ದಿನಗಳಲ್ಲಿ ತಾನೂ ಸೇರಿದಂತೆ ಹಲವಾರು ಪತ್ರಿಕಾ ಛಾಯಾಗ್ರಾಹಕರು ಕಠಿಣ ಸವಾಲುಗಳನ್ನು ಎದುರಿಸಿದ್ದಿದೆ. ಇಚ್ಚಾಶಕ್ತಿಯೊಂದಿದ್ದರೆ ಪತ್ರಿಕಾ ವೃತ್ತಿಯಲ್ಲೂ ಛಾಯಾಗ್ರಾಹಕರೂ ಗುರುತಿಸಿಕೊಳ್ಳಲು ಸಾಧ್ಯ ಎಂದೂ ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಸುಮಾರು ಐದು ದಶಕಗಳ ಕಾಲ ಪೋಟೋ ಜರ್ನಲಿಸ್ಟ್ ಆಗಿದ್ದ ಹಫೀಜ್ ಅವರ ಕ್ರಿಯಾಶೀಲತೆ ಯುವ ವೃತ್ತಿ ಬಾಂಧವರಿಗೆ ಮಾದರಿ ಎಂದರು. ಹಲವಾರು ಪತ್ರಿಕೆಗಳಿಗೆ ಮತ್ತು ಸುದ್ದಿ ಸಂಸ್ಥೆಗಳಿಗೆ ಹಿರಿಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಹಫೀಜ್ ನಿಜಕ್ಕೂ ಅಭಿನಂದನಾರ್ಹರು. ಅವರು ಆ ಕಾಲಘಟ್ಟದಲ್ಲೇ ಕೆಯುಡಬ್ಲ್ಯೂಜೆ ಸಂಘದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ ಎಂದರು.

    ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ ಮಲ್ಲಪ್ಪ ಮಾತನಾಡಿ, ಹಫೀಜ್‌ ಅವರ ಪರಿಶ್ರಮದ ಗುಣ ಇಂದು ಅವರನ್ನು ಪತ್ರಿಕೋದ್ಯಮ ಗುರುತಿಸುವಂತೆ ಮಾಡಿದೆ. ಹಿರಿಯರಾಗಿ ಎಲ್ಲ ಕಿರಿಯರಿಗೂ ವೃತ್ತಿ ಕ್ಷೇತ್ರದಲ್ಲಿ ಅವರು ಮಾರ್ಗದರ್ಶಕರಾಗಿದ್ದರು ಎಂದರು.

    ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕೆ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಜಿಕ್ರಿಯಾ, ಸಮಿತಿ ಸದಸ್ಯ ಸ್ವಾಮಿ, ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಸೋಮಣ್ಣ ಸೇರಿದಂತೆ ಸಂಘದ ಹಲವಾರು ಸದಸ್ಯರು ಮತ್ತು ಪ್ರೆಸ್‌ಕ್ಲಬ್ ಸದಸ್ಯರೂ ಉಪಸ್ಥಿತರಿದ್ದರು. ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಸೋಮಶೇಖರ ಗಾಂಧಿ ವಂದನಾರ್ಪಣೆ ಸಲ್ಲಿಸಿದರು.

    ‘ಚಿಕನ್​ ತರ್ತೀವಿ, ಅನ್ನ ಮಾಡಿಟ್ಟಿರಿ’ ಎಂದವರಿಗೆ ತಿನ್ನುವ ಋಣವೇ ಇರಲಿಲ್ಲ; ‘ಒಟ್ಟಿಗೇ ಊಟ ಮಾಡೋಣ’ ಎಂದಿದ್ದ ಮೂವರೂ ಜೊತೆಗೇ ಸತ್ತರು!

    ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ

    ನಿಂತಿದ್ದ ಕಾರಲ್ಲಿ ಶವ ಪತ್ತೆ: ಬೆಂಗಳೂರು ಮೂಲದ ವ್ಯಕ್ತಿಯ ನಿಗೂಢ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts