More

    ಕುವೆಂಪು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ

    ಕೆ.ಆರ್.ನಗರ: ವಿಶ್ವ ಮಾನವ ಸಂದೇಶ ನೀಡುವ ಮೂಲಕ ಕುವೆಂಪು ಅವರು ತಮ್ಮ ವಿಚಾರಧಾರೆಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ರಾಷ್ಟ್ರೀಯ ಯೋಗಪಟು ಗೋಪಾಲ್‌ರಾಜು ಹೇಳಿದರು.


    ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲದಕ್ಕೂ ನೇರ ನಿಷ್ಠುರವಾಗಿದ್ದರು. ಸಾಹಿತ್ಯ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿದ ವಿಶ್ವದ ಏಕೈಕ ಕವಿ ಎಂದು ಬಣ್ಣಿಸಿದರು.


    ಕುವೆಂಪು ನಾಸ್ತಿಕರಲ್ಲ, ದೇವರ ಬಗ್ಗೆ ನಂಬಿಕೆ ಇಟ್ಟವರು. ಆದರೆ, ಮೌಢ್ಯ ತೊಲಗಿಸಿ ವಿದ್ಯೆ ಕಲಿತು ವೈಚಾರಿಕತೆಗೆ ಬನ್ನಿ ಎಂದು ಎಚ್ಚರಿಸಿದವರು. ಮೌಢ್ಯಗಳನ್ನು ವಿರೋಧಿಸಿ ಸಮಾಜವನ್ನು ವಿಶ್ವದೆಡೆ ನೋಡುವಂತೆ ಮಾಡಿದವರು ಎಂದು ಹೇಳಿದರು.


    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಮಾತನಾಡಿ, ಕಂದಾಚಾರ, ಮೂಢನಂಬಿಕೆಯನ್ನು ಬಡಿದೋಡಿಸಿ ರಾಷ್ಟ್ರೀಯ ಭಾವೈಕ್ಯತೆ ಸಾರಿದರು ಎಂದರು.


    ರೋಟರಿ ಅಧ್ಯಕ್ಷ ನಾಗರಾಜ್ ಬಾವಿಕಟ್ಟಿ ಮಾತನಾಡಿ, ಕುವೆಂಪು ಅವರು ಮನುಜ ಮತ, ವಿಶ್ವಪಥ ಎಂಬಂತೆ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಿದಲ್ಲಿ ದೇಶ ಸರ್ವಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಅನುಮಾನವಿಲ್ಲ ಎಂದರು.


    ಕಸಾಪ ತಾಲೂಕು ಗೌರವಾಧ್ಯಕ್ಷ ಡಾ.ಡಿ.ನಟರಾಜ್, ಮಹಿಳಾಧ್ಯಕ್ಷೆ ಎಂ.ಡಿ.ದಾಕ್ಷಾಯಿಣಿ, ನಗರಾಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ಹೋಬಳಿ ಅಧ್ಯಕ್ಷ ರಾಜಣ್ಣ, ಉದಯಕುಮಾರ್ ಇತರರು ಮಾತನಾಡಿದರು.


    ಸಾಹಿತಿ ಹೆಗ್ಗಂದೂರು ಪ್ರಭಾಕರ್, ಮುಖಂಡರಾದ ಮಂಜು, ಗುರುರಾಜ್, ಮಿರ್ಲೆ ಚಂದ್ರಶೇಖರ್, ಗೋವಿಂದೇಗೌಡ, ಕೆ.ಪಿ.ಭಾರತಿ, ಯೋಗೇಶ್, ಜಿ.ಪ್ರಕಾಶ್, ತಿಪ್ಪೂರು ಮೋಹನ್, ಜಿ.ಬೆನಕಪ್ರಸಾದ್, ಮೋಹನ್‌ಕುಮಾರಿ, ವಂದನಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts