More

    ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ಗಳಿಸಿದ್ದರು

    ಕೆ.ಆರ್.ನಗರ: ಬಾಬಾ ಸಾಹೇಬರು ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ಗಳಿಸಿದ ಜಗತ್ತಿನ ಏಕೈಕ ವ್ಯಕ್ತಿಯಾಗಿದ್ದು ಅವರು ಪ್ರಪಂಚದ ಮಹಾನ್ ಜ್ಞಾನಿ ಹಾಗೂ ಮಹಾನ್ ಮಾನವತವಾದಿಯಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್ ಹೇಳಿದರು.

    ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಬಳಿ ಭಾನುವಾರ ತಾಲೂಕು ಆಡಳಿತ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾ ಸಾಹೇಬರಂತಹ ಜ್ಞಾನಿ ವಿಶ್ವದಲ್ಲೇ ಹಿಂದೆ ಹುಟ್ಟಿಲ್ಲ. ಮುಂದೆ ಹುಟ್ಟುವುದೂ ಇಲ್ಲ ಎಂದರು.

    ಅಂಬೇಡ್ಕರ್ ಅವರು ಸಂವಿಧಾನ ರಚನಾಕಾರರು ಮಾತ್ರವಲ್ಲದೆ 64 ಪದವಿ, 9 ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಶಿಕ್ಷಣ ತಜ್ಞ, ಆರ್ಥಿಕ ತಜ್ಞ, ಇತಿಹಾಸ ತಜ್ಞ, ರಾಜ್ಯಶಾಸ್ತ್ರಜ್ಞ, ಕಾನೂನು ತಜ್ಞರಲ್ಲದೆ ಸಮಾಜ ಚಿಂತಕರಾಗಿ 50 ಸಾವಿರ ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಪ್ರೇಮಿಯಾಗಿದ್ದರು. ಇವರ ಪಾಂಡಿತ್ಯಕ್ಕೆ ಮೆಚ್ಚಿದ ಲಂಡನ್ ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ನೀಡುವ ಮೂಲಕ ಅವರನ್ನು ಗೌರವಿಸಿತು ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಮಾತನಾಡಿ, ಈ ದೇಶದಲ್ಲಿ ತಲೆತಲಾಂತರಗಳಿಂದ ತಾಂಡವಾಡುತ್ತಿದ್ದ ಅಸ್ಪೃಶ್ಯತೆ, ಮೌಢ್ಯತೆ, ಕಂದಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಸಿಡಿದೆದ್ದು ಅವುಗಳ ನಿರ್ಮೂಲನೆಗೆ ಶಿಕ್ಷಣವೇ ಮದ್ದು ಎಂದು ಅರಿತು ಶಿಕ್ಷಣಕ್ಕೆ ಒತ್ತು ನೀಡಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್. ಅವರು ಗಳಿಸಿದ ಶಿಕ್ಷಣ, ಪದವಿಗಳು, ಡಾಕ್ಟರ್‌ರೇಟ್‌ಗಳ ಬಗ್ಗೆ ಪ್ರತಿ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ನಾಮಫಲಕ ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
    ದಲಿತ ಮುಖಂಡರಾದ ಡಿ.ಕೆ.ಕೊಪ್ಪಲು ರಾಜಯ್ಯ, ಎಂ.ಲೋಕೇಶ್, ಕಂಚುಗಾರಕೊಪ್ಪಲು ಸ್ವಾಮಿ, ಶಾಂತಮ್ಮ ರಾಜಯ್ಯ ಮಾತನಾಡಿದರು. ಜಯಂತಿ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ತಳಿರು, ತೋರಣ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ತಾಲೂಕಿನ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

    ಉಪಾಹಾರ ವಿತರಣೆ: ಜಯಂತಿ ಆಚರಣೆ ಅಂಗವಾಗಿ ತಾಲೂಕು ಭೀಮ್ ಆರ್ಮಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಜನರಿಗೆ ಲಘು ಉಪಾಹಾರ ವಿತರಿಸಲಾಯಿತು.

    ಜಿಪಂ ಮಾಜಿ ಸದಸ್ಯ ಅರ್ಜುನಹಳ್ಳಿ ರಾಜಯ್ಯ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಪುರಸಭಾ ಸದ್ಯಸರಾದ ಕೋಳಿಪ್ರಕಾಶ್, ಮಿಕ್ಸರ್‌ಶಂಕರ್, ಶಂಕರ್ ಸ್ವಾಮಿ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಟಿಎಸ್‌ಡಬ್ಲ್ಯೂ ಎಸ್.ಎಂ.ಅಶೋಕ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್, ಬಿಇಒ ಆರ್.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಎಸ್‌ಸಿ ಘಟಕದ ಅಧ್ಯಕ್ಷ ನಂದೀಶ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಭೀಮ್ ಆರ್ಮಿ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ಗೀತಾ ಮಹೇಶ್, ಮಂಜುರಾಜ್, ರಾಜಯ್ಯ, ಕಾಂತರಾಜ್, ಚೆಲುವರಾಜ್, ಎಂ.ಎಸ್.ನಂಜುಂಡಸ್ವಾಮಿ, ರಾಜೇಶ್, ರವಿ ಪೂಜಾರಿ, ಕುಮಾರ್, ಸಿದ್ದಾಪುರ ರಮೇಶ್, ಡಾ.ಕೃಷ್ಣ, ರಾಜಶೇಖರ್ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts