More

    ಕುವೆಂಪು ಬದುಕೇ ನಾಡಿನ ದೊಡ್ಡ ಆಸ್ತಿ: ವಿಶ್ರಾಂತ ಕನ್ನಡ ಉಪಾಧ್ಯಾಯ ಮದರಸಾಬ್ ಬಣ್ಣನೆ

    ಕಿಕ್ಕೇರಿ: ವಿಶ್ವಮಾನವ ವಿಚಾರಧಾರೆಯ ಜಗದಕವಿ ಕುವೆಂಪು ವಾಣಿ ಮನುಜಮತಕ್ಕೆ ದಿವ್ಯವಾಣಿಯಾಗಿದೆ ಎಂದು ವಿಶ್ರಾಂತ ಕನ್ನಡ ಉಪಾಧ್ಯಾಯ ಮದರಸಾಬ್ ಬಣ್ಣಿಸಿದರು.
    ಪಟ್ಟಣದಲ್ಲಿ ಬಸವನಗುಡಿ ಕೆಂಪೇಗೌಡರ ಒಕ್ಕಲಿಗ ಸಂಘದವರು ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಐರಿಷ್ ಕವಿ ಕನ್ನಡದಲ್ಲಿ ಪಾಂಡಿತ್ಯ ಸಾಧಿಸಲು ಕುವೆಂಪು ಅವರಿಗೆ ಹಿತೋಕ್ತಿ ನುಡಿಯದಿದ್ದರೆ ಕನ್ನಡ ನಾಡು ದೊಡ್ಡ ಕವಿಯನ್ನು ಕಳೆದುಕೊಳ್ಳುತ್ತಿತ್ತು. ನಾಡಿನ ದೊಡ್ಡ ಅಸ್ಮಿತೆಯಾಗಿ, ನಾಡಗೀತೆ, ರೈತ ಗೀತೆಯ ಮೂಲಕ ನಿತ್ಯ ಸ್ಮರಿಸುವ ಕವಿಯಾದ ಕುವೆಂಪು ಬದುಕೇ ನಾಡಿಗೆ ದೊಡ್ಡ ಆಸ್ತಿಯಾಗಿದೆ ಎಂದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಮಾತನಾಡಿ, ಪ್ರಕೃತಿ ಆರಾಧಕ ಕುವೆಂಪು ಬದುಕು, ಬರಹ ಎಲ್ಲ ಸಮುದಾಯಕ್ಕೆ ಬೇಕಿದೆ. ಕವಿ, ಸಾಹಿತಿ, ನಾಟಕಕಾರ, ದಾರ್ಶನಿಕ, ಸಾಮಾಜಿಕ ಹರಿಕಾರರಾಗಿ ರೈತ, ಯೋಧ, ದಾಂಪತ್ಯ, ಪ್ರೇಮ ಕವಿತೆ ಎನ್ನದೆ ಎಲ್ಲ ಮಜಲುಗಳಲ್ಲಿ ಕಾವ್ಯದ ರಸದೌತಣವನ್ನು ನಾಡಿಗೆ ನೀಡಿ ಕನ್ನಡ ಸಾರಸ್ವತ ಲೋಕದ ಮೇರು ಪರ್ವತವಾಗಿದ್ದಾರೆ ಎಂದರು.
    ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಮುಖಂಡರಾದ ಕೇಶವಮೂರ್ತಿ, ಮಧುಕರ್, ಸತ್ಯ, ಕಾಯಿ ಸುರೇಶ್, ಕುಮಾರ್, ಜಾಣೇಗೌಡ, ಜೆಸಿಬಿ ಲೋಕೇಶ್, ಮಹದೇವು, ಕೆ.ವೈ.ಹರೀಶ್, ಮಂಜೇಗೌಡ, ಕೆ.ಟಿ.ಪರಮೇಶ್, ಉಮೇಶ್, ನಾಗರಾಜು, ಕೆ.ಜಿ.ತಮ್ಮಣ್ಣ, ಕೆ.ಜಿ.ಪುಟ್ಟರಾಜು, ಶೇಖರ್, ಗೌತಮ್, ಭದ್ರೇಗೌಡ, ಗೋವಿಂದರಾಜು ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts