More

    ಶೈಕ್ಷಣಿಕ ಅನುದಾನ ನೀಡುವಲ್ಲಿ ತಾರತಮ್ಯ: ಗುಮಗೇರಾ ಗ್ರಾಪಂ ಎದುರು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪ್ರತಿಭಟನೆ

    ಕುಷ್ಟಗಿ: ಶೈಕ್ಷಣಿಕ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಮಗೇರಾ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಗ್ರಾಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಪಿಯು ವಿದ್ಯಾರ್ಥಿಗಳಿಗೆ 800 ರೂ., ಪದವಿ, ಎಂಎ ಹಾಗೂ ಬಿ.ಇಡಿ ವಿದ್ಯಾರ್ಥಿಗಳಿಗೆ ಕೇವಲ 1,000 ರೂ. ಅನುದಾನ ನೀಡಲಾಗುತ್ತಿದೆ. ಬೇರೆ ಪಂಚಾಯಿತಿಗಳಲ್ಲಿ ಪಿಯು ವಿದ್ಯಾರ್ಥಿಗಳಿಗೆ 1,500 ರೂ., ಪದವಿ ವಿದ್ಯಾರ್ಥಿಗಳಿಗೆ ಎರಡು ಸಾವಿರ ರೂ. ಹಾಗೂ ಎಂಎ ಹಾಗೂ ಬಿ.ಇಡಿ ವಿದ್ಯಾರ್ಥಿಗಳಿಗೆ 2,500 ರೂ. ನೀಡಲಾಗುತ್ತಿದೆ. ಬೇರೆ ಪಂಚಾಯಿತಿಗಳಲ್ಲಿ ನೀಡುವಂತೆ ಇಲ್ಲೂ ನೀಡಿ ಎಂದು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ವಿದ್ಯಾರ್ಥಿಗಳಾದ ರಾಘವೇಂದ್ರ ಗೌಡರ್, ಮಹೇಶ ಗಂಗನಾಳ, ಅಮರೇಶ ನಾಗರಾಳ, ನಿರುಪಾದಿ ಗುಡದೂರು, ಯಶೋದಾ ಪೊಪಾ, ಸುಮಾ ತಳವಾರ್, ಕರಿಯಮ್ಮ ಗಂಗನಾಳ ಇತರರಿದ್ದರು.

    ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಕ್ಸ್ ವಸೂಲಿಯಿಂದ ಬರುವ ಹಣದಿಂದಲೇ ಶೈಕ್ಷಣಿಕ ಅನುದಾನ ನೀಡಬೇಕು. ತೆರಿಗೆ ಸರಿಯಾಗಿ ವಸೂಲಿಯಾಗುತ್ತಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ.
    | ಅಂಬುಜಾ ಪಾಟೀಲ್ ಪಿಡಿಒ, ಗುಮಗೇರಾ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts