More

    ಪದವಿ ಪರೀಕ್ಷಾ ಶುಲ್ಕ ಬಾಕಿ ಪಾವತಿ ವಿಚಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳು

    ಕುಷ್ಟಗಿ: ಪ್ರವೇಶ ಹಾಗೂ ಪರೀಕ್ಷಾ ಶುಲ್ಕದ ಬಾಕಿ ಪಾವತಿ ವಿಚಾರಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶುಕ್ರವಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ.

    ವಿಎಸ್‌ಕೆ ವಿಶ್ವವಿದ್ಯಾಲಯದ ನಿರ್ದೇಶನದಂತೆ ಕಡ್ಡಾಯವಾಗಿ ಬಾಕಿ ಶುಲ್ಕ ಪಾವತಿಸಿದ ನಂತರವೇ ಪದವಿ ಅಂಕಪಟ್ಟಿ ನೀಡುವುದಾಗಿ ಕಾಲೇಜಿನ ಪ್ರಚಾರ್ಯ ಹೇಳುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಹಣ ಕಟ್ಟಿ ಅಂಕಪಟ್ಟಿ ಪಡೆದಿದ್ದಾರೆ. ಯಾವುದೇ ಬಾಕಿ ಇಲ್ಲದಿದ್ದರೂ ಈ ಹಿಂದಿನ ವರ್ಷದ ವಿದ್ಯಾರ್ಥಿಗಳ ಬಾಕಿ ಶುಲ್ಕವನ್ನು ನಮ್ಮ ಮೇಲೆ ಹೇರುತ್ತಿದ್ದಾರೆಂದು ಕೆಲ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಜ.12ರಂದು ಹಾಲಿ ಹಾಗೂ ಮಾಜಿ ಶಾಸಕರ ಮೊರೆ ಹೋಗಿದ್ದರು. ಆದರೆ, ಪ್ರಾಚಾರ್ಯ ಹಾಗೂ ಉಪನ್ಯಾಸಕರು ಪಟ್ಟು ಸಡಿಲಿಸಿರಲಿಲ್ಲ. ಸದ್ಯ ಪ್ರತಿಭಟನೆಯ ನಿರ್ಧಾರಕ್ಕೆ ಬಂದಿರುವ ವಿದ್ಯಾರ್ಥಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ವಿದ್ಯಾರ್ಥಿಗಳು ಠಾಣೆಗೆ ಬಂದಾಗ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಹಾಗೂ ಉಪನ್ಯಾಸಕ ಭೋಜರಾಜ್ ಬಾಕಿ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳ ಪಟ್ಟಿ ಹಾಗೂ ವಿಶ್ವವಿದ್ಯಾಲಯಕ್ಕೆ ಭರಿಸಿರುವ ಮಾಹಿತಿ ಒಳಗೊಂಡ ದಾಖಲೆ ಸಮೇತ ಪಿಎಸ್‌ಐ ಮೌನೇಶ ರಾಠೋಡ್‌ಗೆ ಮನವರಿಕೆ ಮಾಡಿದರು. ಪ್ರಾಚಾರ್ಯರಂತೆ ನೀವೂ ಬಾಕಿ ಪಾವತಿಸಿರುವ ಬಗ್ಗೆ ದಾಖಲೆ ನೀಡಿ ಎಂದು ಪಿಎಸ್‌ಐ ವಿದ್ಯಾರ್ಥಿಗಳಿಗೆ ಸೂಚಿಸಿ ಕಳುಹಿಸಿದರು. ಬಾಕಿ ಪಾವತಿಗೆ ಸಂಬಂಧಿಸಿದಂತೆ ಜ.13ರಂದು ವಿಜಯವಾಣಿ ‘ಬಾಕಿ ಕಟ್ಟಿ ಅಂಕಪಟ್ಟಿ ಪಡೆಯಿರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts