More

    ಬೇರೆ ಜಿಲ್ಲೆಯ ಮತದಾರರ ಹೆಸರು ತೆಗೆದು ಹಾಕಿ: ಬಿಎಲ್‌ಒಗಳಿಗೆ ಡಿಸಿ ವಿಕಾಸ್ ಕಿಶೋರ್ ಸೂಚನೆ

    ಕುಷ್ಟಗಿ: ದೋಷಮುಕ್ತ ಮತದಾರರ ಪಟ್ಟಿ ಸಿದ್ಧತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹಾಗೂ ಉಪ ವಿಭಾಗಾಧಿಕಾರಿ(ಎಸಿ) ಬಸವಣಪ್ಪ ಕಲಶೆಟ್ಟಿ ಶುಕ್ರವಾರ ಪರಿಶೀಲಿಸಿದರು.

    ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಮತಗಟ್ಟೆ ಅಧಿಕಾರಿ(ಬಿಎಲ್‌ಒ)ಗಳಿಂದ ಮಾಹಿತಿ ಪಡೆದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾದ ಮೀಸಲಾತಿ(371ಜೆ) ಪ್ರಮಾಣ ಪತ್ರ ಪಡೆಯುವ ಸಂಬಂಧ ವಿಜಯಪುರ ಹಾಗೂ ಇತರ ಜಿಲ್ಲೆಯವರು ತಾಲೂಕಿನ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ಗುರುತಿನ ಚೀಟಿ ಪಡೆದು ಸ್ವಂತ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರ ಹೆಸರುಗಳನ್ನು ತೆಗೆದು ಹಾಕುವಂತೆ ಬಿಎಲ್‌ಒಗಳಿಗೆ ಡಿಸಿ ವಿಕಾಸ್ ಕಿಶೋರ್ ಸೂಚಿಸಿದರು.

    ಮೃತ ಮತದಾರರ ಹೆಸರು ತೆಗೆದು ಹಾಕುವಲ್ಲಿ ಮರಣ ಪ್ರಮಾಣ ಪತ್ರದ ಸಮಸ್ಯೆ ಎದುರಾಗಿದೆ ಎಂದು ಬಿಎಲ್‌ಒಗಳು ಸಮಸ್ಯೆ ಹೇಳಿಕೊಂಡರು. ಮೃತರ ಸಂಬಂಧಿಗಳು ಮರಣ ಪ್ರಮಾಣ ಪತ್ರಕ್ಕಾಗಿ ಬಂದಾಗ ಒಂದು ಪ್ರತಿಯನ್ನು ಸಂಬಂಧಿಸಿದ ಬಿಎಲ್‌ಒಗಳಿಗೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಡಿಸಿ ತಿಳಿಸಿದರು.

    ತಾಲೂಕಿನ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಗುರುತಿನ ಚೀಟಿ ಹೊಂದಿದವರನ್ನು ಗುರುತಿಸಿ ಕಾಯಂ ನಿವಾಸಿಯಾಗಿರದಿದ್ದಲ್ಲಿ ತಕ್ಷಣವೇ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವಂತೆ ಸೂಚಿಸಿದರು. ತಹಸೀಲ್ದಾರ್ ಎಂ.ಸಿದ್ದೇಶ, ಪುರಸಭೆ ಮುಖ್ಯಾಧಿಕಾರಿ ಷಣ್ಮುಖ, ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts