More

    ಬಾದಿಮನಾಳ ಗ್ರಾಮ ವಾಸ್ತವ್ಯಕ್ಕೆ ಅಗತ್ಯ ತಯಾರಿ ಕೈಗೊಳ್ಳಿ: ತಹಸೀಲ್ದಾರ್ ಗುರುರಾಜ ಛಲವಾದಿ ಸೂಚನೆ

    ಕುಷ್ಟಗಿ: ಮಳೆಯಿಂದ ಬಿದ್ದ ಮನೆಗಳು ಹಾಗೂ ಬೆಳೆ ಹಾನಿಗೆ ಸಂಬಂಧಿಸಿ ಪರಿಹಾರ ವಿತರಿಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಗುರುರಾಜ ಛಲವಾದಿ ಸೂಚಿಸಿದರು.

    ತುಮರಿಕೊಪ್ಪ ಗ್ರಾಪಂ ವ್ಯಾಪ್ತಿಯ ಬಾದಿಮನಾಳ ಗ್ರಾಮದಲ್ಲಿ ನ.18ರಂದು ನಡೆಯಲಿರುವ ಗ್ರಾಮ ವಾಸ್ತವ್ಯ ನಿಮಿತ್ತ ತಹಸಿಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಕಾರ್ಯಕ್ರಮಕ್ಕೆ ಒಂದು ವಾರ ಕಾಲಾವಕಾಶ ಇದೆ. ಅಷ್ಟರೊಳಗೆ ವಿವಿಧ ಮಾಸಾಶನ, ಇತರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಬಾದಿಮನಾಳ ಭಾಗದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮದ್ಯ ಅಕ್ರಮ ಮಾರಾಟ ಪ್ರಕರಣ ಹೆಚ್ಚು ಎಂಬ ಮಾಹಿತಿ ಇದ್ದು, ನಿಯಂತ್ರಿಸಲು ಕ್ರಮವಹಿವಂತೆ ಅಬಕಾರಿ ಅಧಿಕಾರಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಊಟ-ಉಪಾಹಾರದ ವ್ಯವಸ್ಥೆ ಮಾಡುವಂತೆ ಅಕ್ಷರ ದಾಸೋಹ ಅಧಿಕಾರಿಗೆ ತಿಳಿಸಿದರು. ತಾಪಂ ಇಒ ಶಿವಪ್ಪ ಸುಬೇದಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್, ಅಕ್ಷರ ದಾಸೋಹ ಅಧಿಕಾರಿ ಕೆ.ಶರಣಪ್ಪ, ಕೃಷಿ ಅಧಿಕಾರಿ ನಾಗನಗೌಡ ಪಾಟೀಲ್, ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಇತರರಿದ್ದರು.

    ಪಿಡಿಒಗಾಗಿ ಕಾದರೂ ಬರಲಿಲ್ಲ : ಬೆಳಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ತಹಸೀಲ್ದಾರ್, ತಾಪಂ ಇಒ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಯಲ್ಲಿದ್ದರು. ಸಭೆ ಆರಂಭಿಸಲು ತುಮರಿಕೊಪ್ಪ ಗ್ರಾಪಂ ಪಿಡಿಒ ಅಮೀನ್ ಬಂದಿರಲಿಲ್ಲ. ಪಿಡಿಒಗೆ ಸಮಗ್ರ ಮಾಹಿತಿ ಇರುತ್ತದೆ. ಬಂದ ನಂತರ ಚರ್ಚಿಸೋಣ ಎಂದು ತಹಸೀಲ್ದಾರ್ ತಿಳಿಸಿದರು. ತಹಸಿಲ್ ಕಚೇರಿ ಸಿಬ್ಬಂದಿ ಪಿಡಿಒಗೆ ಫೋನ್ ಮಾಡುತ್ತಲೇ ಇದ್ದರು. ಐದು ನಿಮಿಷ, ಎರಡು ನಿಮಿಷ ಎನ್ನುತ್ತ 40 ನಿಮಿಷವಾದರೂ ಬರಲೇ ಇಲ್ಲ. ಕೊನೆಗೆ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದ ತಹಸೀಲ್ದಾರ್ ಗುರುರಾಜ ಛಲವಾದಿ, ಪಿಡಿಒ ಬಂದ ನಂತರ ಮಾಹಿತಿ ಪಡೆಯುವುದಾಗಿ ಹೇಳಿ ಸಭೆ ಮುಕ್ತಾಯಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts