More

    ಒತ್ತಡ ರಹಿತ ಜೀವನ ನಡೆಸಿ, ತಾಲೂಕು ಆಸ್ಪತ್ರೆಯ ದಂತ ವೈದ್ಯೆ ಶ್ರೀವಿದ್ಯಾ ಸಲಹೆ

    ಕುಷ್ಟಗಿ: ಒತ್ತಡರಹಿತ ಜೀವನ ಶೈಲಿ ಆರೋಗ್ಯದ ಲಕ್ಷಣವಾಗಿದೆ ಎಂದು ತಾಲೂಕು ಆಸ್ಪತ್ರೆಯ ದಂತ ವೈದ್ಯೆ ಶ್ರೀವಿದ್ಯಾ ಹೇಳಿದರು.

    ಪಟ್ಟಣದ ವಿಜಯ ವಿಠ್ಠಲ ವಿದ್ಯಾ ಮಂದಿರದಲ್ಲಿ ಸ್ಥಳೀಯ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಿದ್ದ ಎನ್ನೆಸ್ಸೆಸ್ ಶಿಬಿರದಲ್ಲಿ ವಿದ್ಯಾರ್ಥಿ ಜೀವನ-ಆರೋಗ್ಯ ಕುರಿತು ಉಪನ್ಯಾಸ ನೀಡಿದರು.

    ವಿವಿಧ ತರಕಾರಿಗಳನ್ನೊಳಗೊಂಡ ಆಹಾರ ಸೇವನೆ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಬೇಕು. ಹೆಣ್ಣುಮಕ್ಕಳು ವೈಯಕ್ತಿಕ ಶುಚಿತ್ವದ ಕಡೆ ಕಾಳಜಿ ವಹಿಸಬೇಕು ಎಂದರು.

    ನಿವೃತ್ತ ಮುಖ್ಯಶಿಕ್ಷಕ ಈಶಪ್ಪ ತಳವಾರ, ವಿಜಯ ವಿಠ್ಠಲ ವಿದ್ಯಾ ಮಂದಿರದ ಶಿಕ್ಷಕ ವೈ.ಕೃಷ್ಣ, ಎನ್ನೆಸ್ಸೆಸ್ಸೆ ಕಾರ್ಯಕ್ರಮ ಅಧಿಕಾರಿ ಡಾ.ನಾಗರಾಜ ಹೀರಾ, ವ್ಯವಸ್ಥಾಪಕ ಡಾ.ವಿಜಯಕುಮಾರ ಕುದರಿ, ಉಪನ್ಯಾಸಕರಾದ ಮಲ್ಲಿಕಾರ್ಜುನ ಗಂಗನಾಳ, ದೊಡ್ಡಬಸವ ಕುರಿ, ಶ್ರೀದೇವಿ, ಯಮನೂರಪ್ಪ ಸಂಗಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts