More

    ಶೇಕಡವಾರು ಮತದಾನ ಹೆಚ್ಚಳಕ್ಕೆ ಸಹಕರಿಸಿ- ಕುಷ್ಟಗಿ ತಾಪಂ ಇಒ ಶಿವಪ್ಪ ಸುಬೇದಾರ್ ಮನವಿ

    ಕುಷ್ಟಗಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಹಕ್ಕು ಚಲಾಯಿಸುವ ಮೂಲಕ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಬೇಕೆಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.

    ಬ್ಯಾಲಿಹಾಳ ಗ್ರಾಮದಲ್ಲಿ ಅಂಗವಿಕಲರಿಗೆ ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಜಾಗೃತಿ ಮೂಡಿಸಿ ಸೋಮವಾರ ಮಾತನಾಡಿದರು. ಶೇಕಡವಾರು ಮತದಾನ ಕಡಿಮೆಯಾಗುವಲ್ಲಿ ಮತಯಂತ್ರಗಳ ಬಳಕೆ ಕುರಿತು ಮಾಹಿತಿ ಇಲ್ಲದಿರುವುದೂ ಒಂದು ಕಾರಣವಾಗಿದ್ದು, ಈ ಸಂಬಂಧ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಅಂಗವಿಕಲರಿಗೆ ಮತದಾನ ಮಾಡಲು ಅಗತ್ಯ ಸೌಕರ್ಯ ಕಲ್ಪಿಸಲಾಗಿರುತ್ತದೆ ಎಂದರು. ಮಾಸ್ಟರ್ ಟ್ರೈನರ್ ಎಸ್.ಎಸ್.ತೆಮ್ಮಿನಾಳ, ಮತಯಂತ್ರಗಳ ಬಳಕೆ ಕುರಿತು ಮಾಹಿತಿ ನೀಡಿದರು. ಗ್ರಾಮದ 61 ಅಂಗವಿಕಲರು ಕಲ್ಪಿತ ಮತದಾನ ಮಾಡಿದರು. ಐಇಸಿ ಸಂಯೋಜಕ ದೇವರಾಜ ಪತ್ತಾರ್, ಪಿಡಿಒ ಹನುಮಗೌಡ ಇದ್ದರು.

    ಐದು ತಂಡಗಳ ರಚನೆ: ತಾಲೂಕಿನಲ್ಲಿ ಶೇಕಡವಾರು ಮತದಾನ ಹೆಚ್ಚಿಸುವ ಉದ್ದೇಶದಿಂದ ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಜಾಗೃತಿ ಮೂಡಿಸಲು ಮಾಸ್ಟರ್ ಟ್ರೈನರ್, ಸೆಕ್ಟರ್ ಅಧಿಕಾರಿ, ಪಿಡಿಒ ಒಳಗೊಂಡಂತೆ ಐವರು ಅಧಿಕಾರಿಗಳ 5 ತಂಡ ರಚಿಸಲಾಗಿದೆ. ಇವರು ವಿವಿಧ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸಲಿದ್ದಾರೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 300 ಮತದಾರರಿಂದ ಕಲ್ಪಿತ ಮತದಾನ ಮಾಡಿಸಲಾಗುತ್ತಿದೆ ಎಂದು ಇಒ ಶಿವಪ್ಪ ಸುಬೇದಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts