More

    ಶೌಚಗೃಹವಾದ ಕುಷ್ಟಗಿ ಪುರಸಭೆ ವಾಣಿಜ್ಯ ಮಳಿಗೆಗಳ ಮಾಳಿಗೆ; ದುರ್ನಾತ ಸಹಿಸಿಕೊಂಡ ವ್ಯಾಪಾರ ಮಾಡುವ ಪರಿಸ್ಥಿತಿ

    ಕುಷ್ಟಗಿ: ಬಯಲು ಜಾಗ, ಜಮೀನು, ರಸ್ತೆಯ ಅಕ್ಕ-ಪಕ್ಕ ಬಹುರ್ದೆಸೆಗೆ ತೆರಳುವುದು ಸಾಮಾನ್ಯ. ಆದರೆ, ಪಟ್ಟಣದ ಸಂತೆ ಮೈದಾನದ ಸುತ್ತಲಿನ ನಿವಾಸಿಗಳು ವಾಣಿಜ್ಯ ಮಳಿಗೆಗಳ ಮಾಳಿಗೆಯನ್ನು ಶೌಚಗೃಹವನ್ನಾಗಿಸಿಕೊಂಡಿದ್ದಾರೆ!

    ಪಟ್ಟಣದ ಪುರಸಭೆ ರಸ್ತೆಯ ಹಳೇ ಪ್ರವಾಸಿ ಮಂದಿರದ ಎದುರಿಗೆ ಸಂತೆ ಮೈದಾನಕ್ಕೆ ಹೊಂದಿಕೊಂಡು ಪುರಸಭೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಮಾಳಿಗೆ ಅಕ್ಷರಶಃ ಬಯಲು ಬಹಿರ್ದೆಸೆಯ ತಾಣವಾಗಿದೆ. ಕಾಲಿಡಲೂ ಜಾಗವಿರದಷ್ಟು ಗಲೀಜು ಕಂಡುಬರುತ್ತಿದೆ. ಬೆಳಗಿನ ಜಾವ ಹಾಗೂ ರಾತ್ರಿ ಹೊತ್ತು ಸುತ್ತಲಿನ ನಿವಾಸಿಗಳು ಬಹಿರ್ದೆಸೆಗೆ ಬರುತ್ತಾರೆ. ದುರ್ನಾತ ಸಹಿಸಿಕೊಂಡು ವ್ಯಾಪಾರ ಮಾಡುವ ಪರಿಸ್ಥಿತಿ ಇದೆ. ಜನ ಮಾಳಿಗೆ ಹತ್ತದಂತೆ ಗೇಟ್ ಅಳವಡಿಸಿ ಎಂದು ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರವಾಸಿ ಮಂದಿರಕ್ಕೆ ಹೊಂದಿಕೊಂಡು ಸಾರ್ವಜನಿಕ ಶೌಚಗೃಹ ಇದ್ದರೂ ಹಣ ನೀಡಬೇಕಾಗುತ್ತದೆ ಎಂದು ತಾಲೂಕು ಆಸ್ಪತ್ರೆಯ ಪಕ್ಕದ ರಸ್ತೆ ಹಾಗೂ ವಾಣಿಜ್ಯ ಮಳಿಗೆಗಳ ಮಾಳಿಗೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.

    ಕೋಟ್
    ವಾಣಿಜ್ಯ ಮಳಿಗೆಗಳ ಮಾಳಿಗೆ ಮೇಲೆ ಜನ ಬಹಿರ್ದೆಸೆಗೆ ತೆರಳುತ್ತಿದ್ದಾರೆಂಬ ಕಾರಣಕ್ಕೆ ಮೆಟ್ಟಿಲುಗಳಿಗೆ ಗೇಟ್ ಅಳವಡಿಸಲು ಅನುದಾನ ಮೀಸಲಿಡಲಾಗಿದೆ. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು. ಜನರೂ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ತೆರಳುವುದನ್ನು ನಿಲ್ಲಿಸಬೇಕು.
    ಜಿ.ಕೆ.ಹಿರೇಮಠ
    ಪುರಸಭೆ ಅಧ್ಯಕ್ಷ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts