More

    ತಗ್ಗಲಿ ತಾಯಿ-ಶಿಶು ಮರಣ ಪ್ರಮಾಣ: ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅಭಿಮತ

    ಕುಷ್ಟಗಿ: ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಹೇಳಿದರು.

    ಅಡವಿಬಾವಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಚಳಗೇರಾ ಬಿ ವಲಯದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕ ಕೊರತೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ಕಾಣಿಸಿಕೊಂಡು ಹೆರಿಗೆ ವೇಳೆ ತೊಂದರೆ ಎದುರಾಗಿ ತಾಯಿ ಮರಣ ಸಂಭವಿಸುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಕಡಿಮೆ ತೂಕದ ಮಕ್ಕಳು ಜನಿಸುತ್ತವೆ. ಇದನ್ನು ತಡೆಗಟ್ಟಲು ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಪೌಷ್ಟಿಕ ಆಹಾರ ಸೇವನೆಯ ಮಹತ್ವ ತಿಳಿಸುವ ಸಂಬಂಧ ಒಂದು ತಿಂಗಳ ಅಭಿಯಾನ ನಡೆಸಲಾಗುತ್ತಿದೆ ಎಂದರು.

    ಪೋಷಣ್ ಅಭಿಯಾನದ ತಾಲೂಕು ಸಂಯೋಜಕಿ ಭಾಗ್ಯಶ್ರೀ ಹೊಸಮನಿ, ಅಂಗನವಾಡಿ ಮೇಲ್ವಿಚಾರಕಿ ಶೋಭಾ ನಾಯಕ್, ಗ್ರಾಪಂ ಸದಸ್ಯರಾದ ಸುರೇಶಗೌಡ ಮಾಲಿಪಾಟೀಲ್, ಮುತ್ತಣ್ಣ, ಸೀತಮ್ಮ, ದ್ಯಾಮವ್ವ ಕಮತಗಿ, ಹನುಮಂತ ಪೂಜಾರ, ಸಿಆರ್‌ಪಿ ಅಯ್ಯಪ್ಪ ಸುರಳ, ಪ್ರಮುಖರಾದ ರಾಜಕುಮಾರ್ ನಾಯಕ್, ಶಂಕ್ರಪ್ಪ ರಾಠೋಡ್, ಮಂಜುನಾಥ ಹಿರೇಮಠ, ಮಹಾಂತೇಶ ಶ್ಯಾಡಲಗೇರಿ, ಹನುಮಂತ ತೋಪಲಕಟ್ಟಿ ಇದ್ದರು.

    ಕಾರ್ಯಕ್ರಮಕ್ಕೂ ಮುನ್ನ ಎತ್ತಿನ ಬಂಡಿಯಲ್ಲಿ ಬಯಕೆ ಬುತ್ತಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಡೊಳ್ಳು ಬಾರಿಸಿ ಗಮನ ಸೆಳೆದರು. ಸಮುದಾಯ ಭವನದ ಆವರಣದಲ್ಲಿ ವಿವಿಧ ಧಾನ್ಯ, ತರಕಾರಿ ಹಾಗೂ ಹಣ್ಣುಗಳಿಂದ ಪೌಷ್ಟಿಕ ಆಹಾರದ ಮಹತ್ವ ಸಾರುವ ಚಿತ್ರ ಬಿಡಿಸಿದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts