More

    ಮಾನಸಿಕ ನೆಮ್ಮದಿಗೆ ಸಂಗೀತ ಉತ್ತಮ ಚಿಕಿತ್ಸೆ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ

    ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ

    ಕುಷ್ಟಗಿ: ಚಿಂತೆಗಳನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ಇದರಿಂದಾಗಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಶಾಸ್ತ್ರೀಯ ಸಂಗೀತವನ್ನು ಚಿಕಿತ್ಸೆಯಂತೆ ಬಳಸಲಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

    ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲಿಂಗನಬಂಡಿಯ ಗಾನಯೋಗಿ ಸಂಗೀತ ಕಲಾ ಸಂಘದ ಸಹಯೋಗದಲ್ಲಿ ಗುರು ಪೌರ್ಣಿಮೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸ್ತ್ರೀಯ ಸಂಗೀತದ ಮಹತ್ವದ ಅರಿವಿದ್ದರೂ ಅದನ್ನು ಕಲಿಯುವ ಹಾಗೂ ಕೇಳುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದರು.

    ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಬಸವ ಸಮಿತಿ ಸ್ಥಳೀಯ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ್, ನಿವೃತ್ತ ಪ್ರಾಚಾರ್ಯರಾದ ಬಸವರಾಜ ಕಂಬಳಿ, ಎಚ್.ಜಿ.ನೀರಗೇರಿ, ಡಾ.ಬಸವರಾಜ ರಾಜೂರು, ಶರಣೆ ಭಾರತಿ ನೀರಗೇರಿ, ಕಲಾವಿದರಾದ ಇಮಾಮ್‌ಸಾಬ್ ಕೋಳೂರು, ವಾಲ್ಮೀಕಪ್ಪ ಯಕ್ಕರನಾಳ, ನೀಲಕಂಠಬಾಬು ನಿಲೋಗಲ್, ಹೊಳಿಯಪ್ಪ ಗುರಿಕಾಶರ, ಮಲ್ಲನಗೌಡ ಅಗಸಿಮುಂದಿನ, ಪುಟ್ಟರಾಜ ಸಂಗೀತ ಶಾಲೆಯ ಮುಖ್ಯಶಿಕ್ಷಕ ಡಿ.ಹನುಮಂತಕುಮಾರ್ ಲಿಂಗನಬಂಡಿ, ಪ್ರಮುಖರಾದ ಶರಣಪ್ಪ ಆಡೂರು, ಡಾ.ಕೆ.ಶರಣಪ್ಪ ನಿಡಶೇಸಿ, ನಟರಾಜ ಸೋನಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts