More

    ಹಣ ಸುರಿದರೆ ಸೂರು ಭಾಗ್ಯ!: ಗುಮಗೇರಾ ಗ್ರಾಪಂ ಸದಸ್ಯರಿಂದ 30 ಸಾವಿರ ರೂ. ಬೇಡಿಕೆ

    ಕುಷ್ಟಗಿ: ವಸತಿ ಯೋಜನೆಯಡಿ ಸೂರು ಹೊಂದಲು ಗ್ರಾಪಂ ಸದಸ್ಯರಿಗೆ 30 ಸಾವಿರ ರೂ. ನೀಡಬೇಕಂತೆ..!

    ತಾಲೂಕಿನ ಗುಮಗೇರಾ ಗ್ರಾಪಂ ವ್ಯಾಪ್ತಿಯ ಸದಸ್ಯರು ಫಲಾನುಭವಿಗಳಿಗೆ ಇಂತಹದೊಂದು ಬೇಡಿಕೆ ಇಟ್ಟಿದ್ದು, ಹಣ ಕೊಟ್ಟ ನಂತರವೇ ಜಿಪಿಎಸ್‌ಗೆ ಅವಕಾಶ ನೀಡುವುದಾಗಿ ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

    ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಮನೆ ನಿರ್ಮಾಣಕ್ಕೂ ಮುನ್ನ ವಿವಿಧ ಹಂತದ ಜಿಪಿಎಸ್ ಮಾಡಬೇಕು. ಹಣ ಕೊಟ್ಟ ಫಲಾನುಭವಿಗಳ ಮನೆಯ ಜಿಪಿಎಸ್ ಮಾಡುವಂತೆ ಗ್ರಾಪಂ ಅಧಿಕಾರಿಗೆ ತಾಕೀತು ಮಾಡಿರುವ ಸದಸ್ಯರು ಹಣ ನೀಡದವರ ಮನೆ ನಿರ್ಮಾಣ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆಂದು ಗ್ರಾಪಂ ವ್ಯಾಪ್ತಿಯ ನಾಗರಾಳ ಗ್ರಾಮದ ಪರಿಶಿಷ್ಟ ಪಂಗಡ ಫಲಾನುಭವಿಗಳು ಆರೋಪಿಸಿದ್ದಾರೆ.

    ತಾಪಂ ಇಒ ಎದುರು ಆಕ್ರೋಶ: ನಾಗರಾಳ ಗ್ರಾಮದ ಯಂಕಮ್ಮ ಕುಷ್ಟಗಿ, ತಾಯಮ್ಮ ಗುಮಗೇರಿ, ಬಸಮ್ಮ, ಗಂಗಮ್ಮ ಎನ್ನುವವರು ಗುರುವಾರ ತಾಪಂ ಕಚೇರಿಗೆ ತೆರಳಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಸದಸ್ಯರು ಹಣದ ಬೇಡಿಕೆ ಇಟ್ಟಿರುವ ಬಗ್ಗೆ ತಾಪಂ ಇಒ ಗಮನಕ್ಕೆ ತಂದರು. ಅಲ್ಲದೆ ಸದಸ್ಯರು ಹಣದ ಬೇಡಿಕೆ ಇಟ್ಟಿರುವ ಬಗ್ಗೆ ಫೋನ್ ಸಂಭಾಷಣೆಯ ಆಡಿಯೋವನ್ನು ಕೇಳಿಸಿದರು. ಹಣ ಕೊಟ್ಟು ಮನೆ ನಿರ್ಮಿಸಿಕೊಳ್ಳುವುದಾದರೆ ಬಡವರು ಏನು ಮಾಡಬೇಕು ಎಂದು ಇಒ ಶಿವಪ್ಪ ಸುಬೇದಾರ್ ಎದುರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇಒ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts