More

    ಫುಟ್‌ಪಾತ್ ಕಾಮಗಾರಿಗಾಗಿ ಗೂಡಂಗಡಿ ತೆರವು

    ಕುಷ್ಟಗಿ: ಪಟ್ಟಣದ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಫುಟ್‌ಪಾತ್ ನಿರ್ಮಿಸುವ ಸಂಬಂಧ ಕಾಮಗಾರಿ ಸ್ಥಳದಲ್ಲಿದ್ದ ಗೂಡಂಗಡಿಗಳನ್ನು ಶುಕ್ರವಾರ ಪಕ್ಕಕ್ಕೆ ಸ್ಥಳಾಂತರಿಸಲಾಯಿತು.

    ಕಾಮಗಾರಿ ಸ್ಥಳದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಬೇಕಿತ್ತು. ಆದರೆ, ಪುರಸಭೆ ಅಧಿಕಾರಿಗಳು ಅಲ್ಲಿಯೇ ಸ್ಥಳಾಂತರಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಪುರಸಭೆಯ 2015-16ನೇ ಸಾಲಿನ 14ನೇ ಹಣಕಾಸು ಯೋಜನೆಯ 10 ಲಕ್ಷ ರೂ.ಗಳ ವೆಚ್ಚದಲ್ಲಿ 168ಮೀ. ಉದ್ದದ ಫುಟ್‌ಪಾತ್ ನಿರ್ಮಿಸಲಾಗುತ್ತಿದೆ. ಬಸವೇಶ್ವರ ವೃತ್ತದಿಂದ ಪುರಸಭೆ ವರೆಗೆ ನಿರ್ಮಿಸಲಾದ ಫುಟ್‌ಪಾತ್ ಮೇಲೆ ಪುನಃ ಸಾಲು ಸಾಲು ಗೂಡಂಗಡಿ ತಲೆ ಎತ್ತಿವೆ. ಇದರಿಂದ ಪಾದಚಾರಿಗಳು ರಸ್ತೆ ಮೇಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಆಸ್ಪತ್ರೆ ಮುಂಭಾಗದಲ್ಲಿಯೂ ಆಸ್ಪತ್ರೆ ಮರೆಮಾಚುವಂತೆ ಗೂಡಂಗಡಿ ತಲೆ ಎತ್ತಿವೆ. ಗೂಡಂಗಡಿ ತೆರವುಗೊಳಿಸಬೇಕೆಂಬ ಸಾರ್ವಜನಿಕರ ಆಗ್ರಹಕ್ಕೆ ಪುರಸಭೆಯಾಗಲಿ, ಆಸ್ಪತ್ರೆ ಆಡಳಿತ ಮಂಡಳಿಯಾಗಲಿ ಈ ವರೆಗೆ ಸ್ಪಂದಿಸಿಲ್ಲ. ಸದ್ಯ ಫುಟ್‌ಪಾತ್ ನಿರ್ಮಿಸುವ ಸಂದರ್ಭದಲ್ಲಿಯಾದರೂ ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

    ಪರಿಶೀಲನೆಗೆ ಆಗ್ರಹ
    ಕಾಮಗಾರಿಗೆ ಬಳಕೆ ಮಾಡುತ್ತಿರುವ ಉಸುಕು ಮಣ್ಣು ಮಿಶ್ರಿತವಾಗಿದೆ. ಕಾಮಗಾರಿ ಆರಂಭವಾಗುವ ಸಂದರ್ಭದಲ್ಲಿಯೇ ಸಂಬಂಧಿಸಿದ ಇಂಜಿನಿಯರ್‌ಗಳು ಪರಿಶೀಲಿಸಬೇಕು. ಇಲ್ಲವಾದಲ್ಲಿ ರಾತ್ರೋರಾತ್ರಿ ಕಳಪೆ ಕಾಮಗಾರಿ ನಿರ್ಮಿಸುತ್ತಾರೆ. ಶಾಸಕರೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ ಎಂದು ಆಸ್ಪತ್ರೆ ಸುತ್ತಲಿನ ನಿವಾಸಿಗಳಾದ ರವೀಂದ್ರ ಬಾಕಳೆ, ಅಬ್ದುಲ್ ನಿಯೀಂ ಇತರರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts