More

    ಎಲ್ಲರೂ ಸೇರಿ ಕನ್ನಡದ ತೇರು ಎಳೆಯೋಣ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ

    ಕುಷ್ಟಗಿ: ನಾಡಿನ ಎಲ್ಲರೂ ಸೇರಿ ಕನ್ನಡದ ತೇರು ಎಳೆದು ಮಾತೃಭಾಷೆಗೆ ಗೌರವ ಸಮರ್ಪಿಸಬೇಕು. ಕನ್ನಡವನ್ನು ಇನ್ನು ಎತ್ತರಕ್ಕೆ ಕೊಂಡ್ಯೂಯಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

    ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ಕನ್ನಡ ರಥವನ್ನು ಗುರುವಾರ ಪಟ್ಟಣದಲ್ಲಿ ಸ್ವಾಗತಿಸಿ ಮಾತನಾಡಿದರು. ಸಮ್ಮೇಳನಗಳಲ್ಲಿ ಸಾಹಿತ್ಯ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಸಾಹಿತ್ಯಾಸಕ್ತರು ಮಾತ್ರವಲ್ಲದೆ ಎಲ್ಲ ವರ್ಗದ ಜನ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕಿದೆ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಪುರ, ಕಸಾಪ ಸಂಸ್ಥೆ ಪ್ರತಿನಿಧಿ ನಬಿಸಾಬ್ ಕುಷ್ಟಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದರಿ, ನಿವೃತ್ತ ಶಿಕ್ಷಕ ಸಿದ್ದಪ್ಪ ಹಕ್ಕಿ ಪ್ರಮುಖರಾದ ಹ.ಯ.ಈಟಿಯವರ್, ಶರಣಪ್ಪ ವಡಿಗೇರಿ, ಆರ.ಕೆ.ಸುಬೇದಾರ್, ಎಸ್.ಎಚ್.ಹಿರೇಮಠ ಇತರರಿದ್ದರು.

    ಸಿಂಧನೂರಿನಿಂದ ಬಂದ ರಥಕ್ಕೆ ಮಾರ್ಗಮಧ್ಯೆ ತಾಲೂಕಿನ ಹಿರೇಮನ್ನಾಪುರದಲ್ಲಿ ಅದ್ದೂರಿ ಸ್ವಾಗತ ಕೋರಿ ಬೀಳ್ಕೊಡಲಾಯಿತು. ಗ್ರಾಮದ ಗವಿಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು 200 ಮೀ.ಉದ್ದದ ಕನ್ನಡ ಧ್ವಜದೊಂದಿಗೆ ರಥಕ್ಕೆ ಸ್ವಾಗತ ಕೋರಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ವಿ.ಎಸ್.ಕಾಡಗಿಮಠ, ಮುಖ್ಯಶಿಕ್ಷಕ ಎಸ್.ಜಿ.ಕಡೇಮನಿ, ಪ್ರಮುಖರಾದ ಬಾಳಪ್ಪ ಹಡಪದ್, ಗೋಪಾಲ್ ಕಲಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts