More

    ಕುಷ್ಟಗಿಯಲ್ಲಿ ಅಮೃತ ಯೋಜನೆಯಡಿ ಕೆರೆ ಅಭಿವೃದ್ಧಿ: ಕಾಮಗಾರಿ ವೀಕ್ಷಿಸಿದ ಜಿಪಂ ಮುಖ್ಯ ಲೆಕ್ಕಾಧಿಕಾರಿ

    ಕುಷ್ಟಗಿ: ಅಮೃತ ಸರೋವರ ಯೋಜನೆಗೆ ತಾಲೂಕಿನ 23 ಕೆರೆಗಳನ್ನು ಆಯ್ಕೆ ಮಾಡಿದ್ದು, ಅಭಿವೃದ್ಧಿ ಕಾರ್ಯ ನಡೆದಿದೆ ಎಂದು ಜಿಪಂ ಮುಖ್ಯಲೆಕ್ಕಾಧಿಕಾರಿ (ಸಿಎಒ) ಅಮೀನ್ ಅತ್ತಾರ ಹೇಳಿದರು. ತಾಲೂಕಿನ ಮಾದಾಪುರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

    ಯೋಜನೆಯ ಮೊದಲ ಹಂತದಲ್ಲಿ ತಾಲೂಕಿನ ಕಾಟಾಪುರ, ಅಂಟರಠಾಣಾ ಯಲ್ಲಮ್ಮನ ಕೆರೆ ಹಾಗೂ ಮಾದಾಪುರದ ಕೆರೆಗೆ ಕಾಯಕಲ್ಪ ನೀಡಲಾಗುತ್ತಿದೆ. ಅಮೃತ ಸರೋವರ ಯೋಜನೆಯ ಉದ್ದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರ ಕೆರೆಗಳನ್ನು ನಿರ್ಮಿಸಿ ವಿಶ್ರಾಂತಿ ಪಡೆಯಲು ಬೆಂಚ್, ವಾಕಿಂಗ್ ಟ್ರ್ಯಾಕ್, ಐಲ್ಯಾಂಡ್ ಹಾಗೂ ಸುತ್ತಲೂ ತಂತಿ ಬೇಲಿ ಅಳವಡಿಸಿ ಆಕರ್ಷಣೆಯ ಕೇಂದ್ರಗಳಾಗಿ ಕಾಣುವಂತೆ ಅಭಿವೃದ್ಧಿಪಡಿಸಬೇಕಿದೆ. ಇದರಿಂದ ಪರಿಸರ ಸಂರಕ್ಷಣೆ ಜತೆಗೆ ಪ್ರಾಣಿ-ಪಕ್ಷಿ, ಜಾನುವಾರುಗಳು ಹಾಗೂ ಜನರಿಗೆ ಕುಡಿವ ನೀರಿನ ವ್ಯವಸ್ಥೆಯೂ ಆಗಲಿದೆ ಎಂದರು. ತಾಂತ್ರಿಕ ಸಂಯೋಜಕ ಕೆ.ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts