More

    ಕಾಟಾಚಾರದ ಕ್ರೀಡಾಕೂಟ ಆಯೋಜನೆ- ರೈತ ಮುಖಂಡ ಎಂ.ಕೆ.ಗೋವಿಂದಪ್ಪ ಆರೋಪ

    ಕುರುಗೋಡು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ತಾಪಂನಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ವಿದ್ಯಾರ್ಥಿಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದ ಜನರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎನ್ನುವ ಉದ್ದೇಶವಿದೆ. ಆದರೆ ವಾಲಿಬಾಲ್, ಖೋಖೋ ಮತ್ತು ಕಬಡ್ಡಿ ಪಂದ್ಯಾವಳಿಯ ಬಹುತೇಕ ತಂಡಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಕಂಡುಬಂತು.

    ತಾಪಂ ಇಒ ಕೆ.ವಿ.ನಿರ್ಮಲಾ ಕ್ರೀಡಾಕೂಟ ಉದ್ಘಾಟಿಸಿ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಕ್ರೀಡಾಕೂಟ ಆಯೋಜನೆ ಮಾಡಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವು ಮುಖ್ಯವಲ್ಲ ಎಂದರು.

    ಸರ್ಕಾರ ಆಯೋಜಿಸಿರುವ ಕ್ರೀಡಾಕೂಟದ ಬಗ್ಗೆ ಹೆಚ್ಚು ಪ್ರಚಾರ ಕೈಗೊಂಡಿಲ್ಲ.ಪರಿಚಿತರಿಗೆ ಮಾತ್ರ ಮಾಹಿತಿ ನೀಡಿ ಕಾಟಾಚಾರದ ಕ್ರೀಡಾಕೂಟ ಆಯೋಜಿಸಿದ್ದಾರೆ ಎಂದು ಕುರುಗೋಡಿನ ರೈತ ಮುಖಂಡ ಎಂ.ಕೆ.ಗೋವಿಂದಪ್ಪ ಆರೋಪಿಸಿದರು. ಗ್ರಾಮೀಣ ಕ್ರೀಡಾಕೂಟದಲ್ಲಿ ಎತ್ತಿನ ಬಂಡಿ ಓಟ, ಕೆಸರಿನ ಗದ್ದೆ ಓಟ, ಕುಸ್ತಿಯಂತಹ ಅಳಿವಿನ ಅಂಚಿನಲ್ಲಿರುವ ಕ್ರೀಡೆಗಳನ್ನು ಆಯೋಜಿಸಬೇಕಿತ್ತು. ಬದಲಿಗೆ ವಾಲಿಬಾಲ್, ಖೋಖೋ ಮತ್ತು ಕಬಡ್ಡಿ ಮಾತ್ರ ಆಯೋಜಿಸಿರುವುದು ಬೇಸರದ ಸಂಗತಿಯಾಗಿದೆ.ಮುಂದಿನ ದಿನಗಳಲ್ಲಾದರೂ ಕ್ರೀಡಾಕೂಟದ ಬಗ್ಗೆ ಹೆಚ್ಚು ಪ್ರಚಾರ ನಡೆಸಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

    ಕ್ರೀಡಾಕೂಟದಲ್ಲಿ 12 ಗ್ರಾಪಂ ತಂಡಗಳು ಭಾಗವಹಿಸಿದ್ದವು. ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಕ್ರೀಡೆಗಳನ್ನು ನಡೆಸಿಕೊಟ್ಟರು. ತಾಪಂ ಯೋಜನಾಧಿಕಾರಿ ರಾಧಿಕಾ, ಕಚೇರಿ ವ್ಯವಸ್ಥಾಪಕ ಅನಿಲ್, ಉಪಪ್ರಾಚಾರ್ಯ ಮಾರುತಿ ಗಾಳಿ, ಪಿಡಿಒ ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts