More

    ಬಳ್ಳಾರಿಗೆ ತೆರಳಲು ಬಸ್ ಸೌಕರ್ಯ ಕಲ್ಪಿಸಿ

    ಕುರುಗೋಡು: ನಿಗದಿತ ಸಮಯದಲ್ಲಿ ಬಸ್ ಸೌಕರ್ಯ ಕಲ್ಪಿಸಲು ವಿದ್ಯಾರ್ಥಿಗಳು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬಸ್ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

    ಬಸ್ ಸೌಕರ್ಯ ಕಲ್ಪಿಸಲು ಆಗ್ರಹ

    ಬಾದನಹಟ್ಟಿ ಗ್ರಾಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪ್ರತಿದಿನ ಬಳ್ಳಾರಿಗೆ ತೆರಳುತ್ತಿದ್ದಾರೆ. ಆದರೆ ಗ್ರಾಮಕ್ಕೆ ಬೆಳಗ್ಗಿನ ಸಮದಲ್ಲಿ ಬಸ್ ತಡವಾಗಿ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಗ್ರಾಮದಿಂದ ಕುರುಗೋಡಿಗೆ ಕಾಲ್ನಡಿಗೆಯಲ್ಲಿ ತೆರಳಿ, ಅಲ್ಲಿಂದ ಬಳ್ಳಾರಿಗೆ ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಜಾತಿಗಣತಿ ವರದಿ ಬಗ್ಗೆ KN ರಾಜಣ್ಣ ಪ್ರತಿಕ್ರಿಯೆ

    ಬಸ್ ಸಮಸ್ಯೆಯಿಂದ ಕಾಲೇಜ್‌ಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ತರಗತಿಗಳಿಂದ ವಂಚಿತರಾಗುವಂತಾಗಿದೆ. ತಡವಾಗಿ ಕಾಲೇಜ್‌ಗೆ ಹೋಗುವುದರಿಂದ ಉಪನ್ಯಾಸಕರು ಹೊರಗಡೆ ನಿಲ್ಲಿಸುತ್ತಿದ್ದಾರೆ. ಪರಿಣಾಮ ಶಿಕ್ಷಣದಿಂದ ದೂರು ಉಳಿಯುವಂತಾಗಿದೆ. ಪಾಲಕರು ಕಾಲೇಜ್ ಹಂತಕ್ಕೆ ಶಿಕ್ಷಣ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಘಟಕದ ವ್ಯವಸ್ಥಾಪಕ ಹರಿಕೃಷ್ಣ ಹಾಗೂ ಕಂಟ್ರೋಲರ್ ರಾಮಯ್ಯ ಭೇಟಿ ನೀಡಿ, ಕಳೆದ ದಿನಗಳಿಂದ ಟಿಕೆಟ್ ನೀಡುವ ಮಿಷನ್ ರಿಪೇರಿಗೆ ಬಂದಿದೆ. ಹಾಗಾಗಿ ಬಸ್‌ಗಳು ನಿಗದಿತ ಸಮಯದಲ್ಲಿ ಸಂಚರಿಸುವುದಕ್ಕೆ ಸಾಧ್ಯವಾಗಿಲ್ಲ. ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ ಓಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
    ವಿದ್ಯಾರ್ಥಿಗಳು ಗಾಳಿ ಸಂದೀಪ್, ಭೀಮೇಶ್, ತಿಪ್ಪೇಸ್ವಾಮಿ, ಶಿವು, ಕೇಶವ, ಶ್ರೀಧರ್, ನಾರಾಯಣ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts