More

    ಕುರಿಗಳೊಂದಿಗೆ ಕುರುಬ ಸಂಘದ ಪ್ರತಿಭಟನೆ

    ಆಳಂದ: ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಗೊಂಡ ಕುರುಬ ಸಂಘದಿಂದ ಪಟ್ಟಣದಲ್ಲಿ ಬುಧವಾರ ಕುರಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಬೆಳಗ್ಗೆ ೧೧ಕ್ಕೆ ಕನಕ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ರಜವಿ ರಸ್ತೆ, ಸಿದ್ಧಾರ್ಥ ಚೌಕ್, ಹಳೆಯ ತಹಸಿಲ್ ಕಚೇರಿ, ಚಕ್ರಿಕಟ್ಟಾ, ಗಣೇಶ ಚೌಕ್, ಶ್ರೀರಾಮ ಮಾರ್ಕೇಟ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪಿತು. ಬಳಿಕ ಮುಖಂಡರು ಕೆಲ ಹೊತ್ತು ಮುಖ್ಯರಸ್ತೆ ಸಂಚಾರ ತಡೆದು ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರಕ್ಕೆ ಗೊಂಡ ಪರ್ಯಾಯ ಪದ ಕುರುಬ ಎನ್ನುವ ಬಗ್ಗೆ ಸಂಪೂರ್ಣ ಕುಲಶಾಸ್ತ್ರೀಯ ಅಧ್ಯಯನದ ವರದಿ ಕಳುಹಿಸಲಾಗಿತ್ತು. ಆದರೆ ಇಲ್ಲಿವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲವೆಂದು ಕಿಡಿಕಾರಿದರು.

    ಬೀದರ್ ಜಿಲ್ಲೆಯಲ್ಲಿ ಗೊಂಡ ಕುರುಬ ಸಮಾಜ ಎಸ್‌ಟಿಯಲ್ಲಿ ಇದೆ. ಗೊಂಡ ಮತ್ತು ಕುರುಬ ಒಂದೇ ಆಗಿದ್ದು, ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

    ಶ್ರೀ ಕೋರಣೇಶ್ವರ ಸ್ವಾಮೀಜಿ, ಪ್ರಭುರಾಯ ಪೂಜಾರಿ, ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಅಹಿಂದ ಜಿಲ್ಲಾಧ್ಯಕ್ಷ ಮಹಾಂತೇಶ ಕವಲಗಾ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಭಗವಂತರಾವ ಪಾಟೀಲ್, ರಾಜ್ಯ ಪ್ರದೇಶ ಕುರುಬ ಸಂಘದ ಹಿರಿಯ ಉಪಾಧ್ಯಕ್ಷ ಈರಣ್ಣ ಝಳಕಿ, ಕುರುಬ ಸಂಘದ ತಾಲೂಕು ಅಧ್ಯಕ್ಷ ಅಮೋಘ ಸಿದ್ಧ ಪೂಜಾರಿ, ಬೀರಣ್ಣ ಕವಲಗಿ, ಧರ್ಮರಾಯ ಹೇರೂರ, ಪರಮೇಶ್ವರ ಆಲೂಗೌಂಡ ಮತ್ತು ನಾಗರಾಜ ಘೋಡಕೆ, ಶಂಕರ ಬಾಳಿ, ಪ್ರಭುರಾವ ಪೂಜಾರಿ, ಭರತರಾಜ ಸಾವಳಗಿ, ಕಲ್ಯಾಣಿ ಹೊದಲೂರ, ಶಿವರಾಜ ತೇಲಾಕುಣಿ, ಮಲ್ಲು ತೋಗರೆ, ಕಲ್ಯಾಣಿ ಸಾವಳಗಿ, ಈರಣ್ಣ ಸಾಹುಕಾರ, ಶಾಂತಪ್ಪ ಹಿಪ್ಪರಗಿ, ಪ್ರಭಾಕರ ಮಂಟಗಿ, ಯಲ್ಲಾಲಿಂಗ ಪೂಜಾರಿ ಧಂಗಾಪುರ ಇತರರು ಪಾಲ್ಗೊಂಡಿದರು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts