More

    ಕುಪ್ಪಮ್ಮ ಕಾಲುವೆ ರಸ್ತೆ ಕಾಮಗಾರಿಗೆ ಒತ್ತಾಯ

    ಕೊಳ್ಳೇಗಾಲ: ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ನಾಯಕರ ಹೊಸ ಬಡಾವಣೆ ಪಕ್ಕದಲ್ಲಿರುವ ಕುಪ್ಪಮ್ಮ ಕಾಲುವೆ ರಸ್ತೆಯ ಕಾಮಗಾರಿಯನ್ನು ಮಾಡುವಂತೆ ಹಾಗೂ ಇದಕ್ಕೆ ತೊಡಕಾಗಿರುವ ಅನಧಿಕೃತ ಶೆಡ್ ತೆರವುಗೊಳಿಸಬೇಕೆಂದು ವಾರ್ಡ್ ನಿವಾಸಿಗಳು ನಗರಸಭೆ ಪೌರಾಯುಕ್ತ ಎ.ರಮೇಶ್ ಅವರಿಗೆ ಶುಕ್ರವಾರ ಮನವಿ ಪತ್ರ ನೀಡಿ ಒತ್ತಾಯಿಸಿದರು.

    ಕುಪ್ಪಮ್ಮ ಕಾಲುವೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ನಗರಸಭೆಯ ನಗರೋತ್ಥಾನ ಟಿಎಸ್‌ಪಿ ಯೋಜನೆಯಡಿ 85 ಲಕ್ಷ ರೂ. ವೆಚ್ಚದ ಆಡಳಿತ್ಮಾಕ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಿದೆ. 2000ನೇ ಇಸವಿಯ ಕೊಳ್ಳೇಗಾಲ ಮಾಸ್ಟರ್ ಪ್ಲಾೃನ್‌ನಲ್ಲಿ 18 ಮೀಟರ್ ರಸ್ತೆಯನ್ನು ತೋರಿಸಿದೆ. ಇದೀಗ ನಗರೋತ್ಥಾನ ಯೋಜನೆಯಡಿ 85 ಲಕ್ಷ ರೂ. ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ, ರಸ್ತೆ ಜಾಗದಲ್ಲಿ ವ್ಯಕ್ತಿಯೊಬ್ಬ ಅನಧಿಕೃತ ಶೆಡ್ ನಿರ್ಮಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಯಾವುದೇ ದಾಖಲೆ ನೀಡದೆ, ಇದು ನನ್ನ ಜಾಗ ಎಂದು ತಕರಾರು ಮಾಡುತ್ತಿದ್ದಾರೆ. ಇದು ನಾಯಕರ ಹೊಸ ಬಡಾವಣೆಗೆ ಮೂಲಸೌಕರ್ಯಕ್ಕೆ ತುಂಬ ತೊಂದರೆ ಆಗಿದೆ. ಈ ಹಿನ್ನೆಲೆ ನಿವಾಸಿಗಳು ಓಡಾಡಲು ರಸ್ತೆ ಹಾಗೂ ಚರಂಡಿಗೆ ಅನುಕೂಲವಾಗುವುದರಿಂದ ಅನಧಿಕೃತ ಶೆಡ್ ಅನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

    ಹಾಗೆಯೇ, ಯೋಜನಾ ಪ್ರಾಧಿಕಾರದಿಂದ 2000ನೇ ಇಸವಿಯ ಕೊಳ್ಳೇಗಾಲದ ಮಾಸ್ಟರ್ ಪ್ಲ್ಯಾನ್‌ನಲ್ಲಿ 18 ಮೀಟರ್ ರಸ್ತೆ ಇದ್ದರೂ ಆ ಜಾಗದಲ್ಲಿ ಇ-ಸ್ವತ್ತು ಹಾಗೂ ಪ್ಲಾೃನ್‌ಗಳನ್ನು ನಗರಸಭೆ ವತಿಯಿಂದ ಹಾಗೂ ಯೋಜನಾ ಪ್ರಾಧಿಕಾರದಿಂದ ನೀಡಿರುವುದು ಕಾನೂನುಬಾಹಿರವಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಸ್ತೆ ಬಿಟ್ಟಿರುವ ಜಾಗದ ಭಾಗದಲ್ಲಿ ನಿವೇಶನಗಳನ್ನು ಕಾಣಿಸಿದ್ದಾರೆ. ಆದ ಕಾರಣ ತಾವು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು. ನಾಯಕ ಜನಾಂಗದ ಬಡಾವಣೆ ಜನರಿಗೆ ಸುಸಜ್ಜಿತ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಬೇಕು. ಇಲ್ಲವೇ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

    ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್, ಚಿಕ್ಕಮಾದನಾಯಕ, ಮಹೇಶ್, ರಮೇಶ್, ಮೂರ್ತಿ, ರಾಕೇಶ್, ವಿಜಯ್, ಸುಶೀಲಾ, ನೇತ್ರಾವತಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts