More

    ‘ಆತ್ಮನಿರ್ಭರ ಭಾರತ ನನ್ನ ಯೋಜನೆ, ಅದನ್ನೇ ಬಿಜೆಪಿ ಕದ್ದಿದೆ, 2023ಕ್ಕೆ ಕರ್ನಾಟಕವನ್ನು ಜೆಡಿಎಸ್​ ರಾಜ್ಯ ಮಾಡ್ತೇನೆ’

    ಮಂಡ್ಯ: ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಭಾನುವಾರದಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನನ್ನೆಲ್ಲ ಪ್ಲಾನ್​ ಕದ್ದು ತನ್ನ ಯೋಜನೆಯಾಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು 2023ಕ್ಕೆ ಕರ್ನಾಟಕವನ್ನು ಜನತಾ ದಳ ರಾಜ್ಯವಾಗಿ ಮಾಡುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಯಾರ್ರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ!

    ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿ ಬರೀ ರಾಮರಾಜ್ಯದ ಮಾತು ಆಡುತ್ತದೆ ಆದರೆ ನಾನು ರಾಮರಾಜ್ಯವನ್ನು ಕಟ್ಟಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. “ನನ್ನ ಕಾರ್ಯಕ್ರಮವೇ ಬೇರೆ ಇದೆ. ಸಾಲಮನ್ನಾ ಘೋಷಣೆ ಮಾಡಿದ್ದೆ. ಸಾಲಮನ್ನಾ ಮಾಡೋಕೆ ಆಗಲ್ಲ ಅಂದ್ರು, ಮಾಡಿ ತೋರಿಸಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನ ಕೊಡದಿದ್ದರೆ ನಮ್ಮ ಪಕ್ಷ ಮುಂದೆಂದೂ ಜನರ ಮತ ಕೇಳಲ್ಲ. ಅಂದೇ ಪಕ್ಷ ವಿಸರ್ಜನೆ ಮಾಡಿಬಿಡುತ್ತೇನೆ. ನನ್ನ ಕಾರ್ಯಕ್ರಮಗಳೊಂದಿಗೆ ಜನರ ಮುಂದೆ ಹೋಗುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಸ್ವತಂತ್ರವಾಗಿ 5 ವರ್ಷಗಳ ಅಧಿಕಾರ ಕೊಟ್ಟರೆ, 5 ವರ್ಷಕ್ಕೆ 5 ಕಾರ್ಯಕ್ರಮವನ್ನ ಅನುಷ್ಠಾನ ಮಾಡುತ್ತೇನೆ. ಮುಂದೆ ನನ್ನ ಯೋಜನೆಗೆ “ಪಂಚರತ್ನ” ಕಾರ್ಯಕ್ರಮ ಎಂದು ಹೆಸರಿಡುತ್ತೇನೆ. ಪಂಚರತ್ನ ಕಾರ್ಯಕ್ರಮ ಬೇಕಂದ್ರೆ ಜೆಡಿಎಸ್ ಬೆಂಬಲಿಸಿ” ಎಂದು ಅವರು ಹೇಳಿದ್ದಾರೆ.

    “ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರೇ ಇರಲಿ, ಆದರೆ ಎಲ್ಲಾ ಕ್ಷೇತ್ರದಲ್ಲೂ ನಾನೇ ಅಭ್ಯರ್ಥಿ ಎಂದು ಮತ ಕೊಡಿ. ರಾಜ್ಯದಲ್ಲಿ ನನ್ನ ಯೋಜನೆ ಜಾರಿಗೆ ತಂದು ದೇಶಕ್ಕೆ ಮಾದರಿ ಮಾಡಿ ತೋರಿಸುತ್ತೇನೆ. ಜ.15ರ ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಮಾಡಲಾಗುವುದು. 2023ರ ಚುನಾವಣೆಗೆ ಇನ್ನೂ ಸಮಯವಿದೆ. ಆಗ ಪ್ರಣಾಳಿಕೆಯಲ್ಲಿ ನನ್ನ ಕಾರ್ಯಕ್ರಮಗಳ ಪಟ್ಟಿ ಕೊಡ್ತೇನೆ” ಎಂದು ಅವರು ನುಡಿದಿದ್ದಾರೆ.

    ಇದನ್ನೂ ಓದಿ: ಹಾರಾಟ ನಡೆಸಿದ ತಕ್ಷಣ ನಾಪತ್ತೆಯಾಗಿತ್ತು ವಿಮಾನ- ಇಂದು ಸಿಕ್ಕಿವೆ ಪೀಸ್​ ಪೀಸ್​ ದೇಹ!

    ಮೋದಿ ಮತ್ತು ಬಿಜೆಪಿ ನನ್ನ ಯೋಜನೆಗಳನ್ನು ಕಾಪಿ ಮಾಡಿದೆ. ಎಲೆಕ್ಟ್ರಾನಿಕ್ ಟಾಯ್ಸ್ ಇಂಡಸ್ಟ್ರಿ ಎಂ.ಓ.ಗೆ ಸಹಿ ಹಾಕಿದವರು ಯಾರು? ಕಾಂಪೀಟ್ ವಿತ್ ಚೀನಾ ಅಂತಾ ಘೋಷಣೆ ಮಾಡಿದ್ದು ಯಾರು? ಇಂದಿನ ಆತ್ಮನಿರ್ಭರ ಭಾರತ ನನ್ನ ಅಂದಿನ ಕಾಂಪೀಟ್ ವಿತ್ ಚೀನಾ ಆಗಿತ್ತು. ಅದಕ್ಕೇ ಬೇರೆ ಹೆಸರು ಕೊಟ್ಟು ಯೋಜನೆ ಜಾರಿ ಮಾಡಲಾಗಿದೆ. ಆದರೆ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. 2023 ಕರ್ನಾಟಕ ರಾಜ್ಯ, ಜನತಾದಳದ ರಾಜ್ಯ, ಜನತಾ ರಾಜ್ಯವಾಗಲಿದೆ. ಅದನ್ನ ತರಲಿಕ್ಕೆ ಏನುಬೇಕು, ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

    ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts