More

    ಗಂಗಾರತಿ ಮಾದರಿಯಲ್ಲಿ ತುಂಗಾರತಿ ಮಾ. 19ರಂದು

    ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದ ಪುಣ್ಯಕೋಟಿ ಮಠದ ವತಿಯಿಂದ ಮಾ. 19ರಂದು ಸಂಜೆ 6 ಗಂಟೆಗೆ 4ನೇ ವರ್ಷದ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ತಿಳಿಸಿದರು.
    ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾನದಿ ತೀರದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿ ತುಂಗಾರತಿ ಕಾರ್ಯಕ್ರಮ ಜರುಗಲಿದೆ. ಹೊಸದುರ್ಗದ ಕುಂಚಿಟಗ ಮಹಾ ಸಂಸ್ಥಾನಮಠದ ಡಾ. ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸವಣೂರ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಸಮ್ಮುಖ ವಹಿಸುವರು. ರಾಣೆಬೆನ್ನೂರ ಶನೇಶ್ವರ ಮಂದಿರದ ಶಿವಯೋಗಿ ಸ್ವಾಮೀಜಿ ಉಪದೇಶಾಮೃತ ನೀಡುವರು. ಅವರೊಳ್ಳಿ ರುದ್ರಸ್ವಾಮಿಮಠದ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸುವರು ಎಂದರು.
    ಮಹಾರಾಷ್ಟ್ರದ ಹಿಂದು ರಾಷ್ಟ್ರ ಸೇನೆ ಅಧ್ಯಕ್ಷ ಧನಂಜಯ ಮಹಾರಾಜ್, ರಾಜ್ಯ ದೇವಾಲಯಗಳ ಸಂಯೋಜಕ ಮನೋಹರ ಮಠದ, ಗ್ರಾಸಿಂ ಬಿರ್ಲಾ ಕಂಪನಿ ಅಧ್ಯಕ್ಷ ಅಜಯ್ ಗುಪ್ತಾ, ಶಾಸಕ ಅರುಣಕುಮಾರ ಪೂಜಾರ, ಮಾಜಿ ಸಚಿವರಾದ ಆರ್. ಶಂಕರ, ರುದ್ರಪ್ಪ ಲಮಾಣಿ ಮತ್ತಿತರರು ಪಾಲ್ಗೊಳ್ಳುವರು.
    ದಾವಣಗೆರೆ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರಿಗೆ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿ ಹಾಗೂ ಹಾನಗಲ್ಲ ತಾಲೂಕಿನ ಹಿರೇಕೌಂಶಿ ವೇದವಿದ್ಯಾ ಪ್ರವೀಣ ಗದಿಗೆಯ್ಯ ಶಾಸ್ತ್ರಿ ಹಿರೇಮಠ ಅವರಿಗೆ ಸದ್ವಿದ್ಯಾ ಸಂಜೀವಿನಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts