More

    ಕುಲವಳ್ಳಿ ಭೂ ಸಮೀಕ್ಷೆಗೆ ಆದ್ಯತೆ

    ಚನ್ನಮ್ಮ ಕಿತ್ತೂರು: ಸರ್ಕಾರದಿಂದ ಕಿತ್ತೂರು ತಾಲೂಕಿನ ಸಾಗುವಳಿ ಭೂ ಸಮೀಕ್ಷೆ ಸಂದರ್ಭದಲ್ಲಿ ಮೊದಲು ಕುಲವಳ್ಳಿ ಭಾಗದ ಭೂ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಭರವಸೆ ನೀಡಿದರು.

    ಇಲ್ಲಿಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಲವಳ್ಳಿ ಸೇರಿ 9 ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟಕ್ಕೆ ಹಲವು ದಾರಿಗಳಿವೆ. ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಿದರೆ ಗೆಲುವಾಗಬಹುದು. ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಭೂಮಿಯನ್ನು ಅ.26 ರ ನಂತರ ಸರ್ವೇ ಮಾಡಲಾಗುವುದು ಎಂದು ಭರವಸೆ ನೀಡಿದರು. ಉತ್ಸವದ ಸಂದರ್ಭದಲ್ಲಿ ಹೋರಾಟಕ್ಕೆ ಅಣಿಯಾಗುವುದು ಸರಿ ಅಲ್ಲ. ಎಲ್ಲರೂ ಒಟ್ಟುಗೂಡಿ ವೀರಮಾತೆಯ ಉತ್ಸವ ಆಚರಿಸೋಣ ಅದಕ್ಕೆ ತಮ್ಮೆಲ್ಲರ ಸಹಕಾರವೂ ಅಗತ್ಯ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಶಾಂತಿಗೆ ಭಂಗ ತರುವ ಕೆಲಸ ಯಾರೂ ಮಾಡಬಾರದು ನಮ್ಮ ಹೋರಾಟ ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿರಬೇಕು ಎಂದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸಲು ತಿಳಿಸಿದರು.

    ರೈತ ನಾಯಕ ಭಿಷ್ಟಪ್ಪ ಶಿಂಧೆ ಮಾತನಾಡಿ, ಕೆಲವರು ನಮ್ಮ ಹೋರಾಟವನ್ನು ಹತ್ತಿಕ್ಕಿ ವಿರೋಧಿಸುವ ಕಾರ್ಯ ಮಾಡುತ್ತಿದ್ದಾರೆ, ಕುಲವಳ್ಳಿಯ ಭೂಮಿ ಕುರಿತು ಯಾರೇ ಮಧ್ಯೆ ಪ್ರವೇಶಿದರೂ ನಾವು ಸುಮ್ಮನಿರುವುದಿಲ್ಲ ಎಂದರು. ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ತಹಸೀಲ್ದಾರ್ ರವೀಂದ್ರ ಹಾದಿಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts