More

    ಶ್ರಮಿಕರಿಗೆ ಸಿಗಲಿ ಸರ್ಕಾರಿ ಸೌಲಭ್ಯ

    ಕುಕನೂರು: ಶ್ರಮಿಕ ವರ್ಗದವರಿಗೆ ಸರ್ಕಾರದ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಶ್ರೀ ರುದ್ರಮುನೇಶ್ವರ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಹೇಳಿದರು.

    ಪಟ್ಟಣದಲ್ಲಿ ಶ್ರೀ ರುದ್ರಮುನೇಶ್ವರ ಹಮಾಲರ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

    ನಿತ್ಯ ಬೆವರು ಹರಿಸಿ ದುಡಿಯುವ ಕಾರ್ಮಿಕರಿಗಾಗಿಯೇ ಮೇ 1ನ್ನು ವಿಶ್ವದಾದ್ಯಂತ ಕಾರ್ಮಿಕ ದಿನವಾಗಿ ಆಚರಿಸಲಾಗುತ್ತಿದೆ. ದುಡಿಮೆಯೇ ಆಧಾರವಾಗಿರುವ ಶ್ರಮಿಕರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ದೊರೆಯಬೇಕಿದೆ. ಈಗಾಗಲೇ ರಾಜಕೀಯ ಪಕ್ಷಗಳು ಹಲವು ಯೋಜನೆಗಳನ್ನು ಘೋಷಿಸಿ ಮತ ಕೇಳುತ್ತಿವೆ. ಅದೇ ರೀತಿ ಕಾರ್ಮಿಕ ವರ್ಗಕ್ಕೂ ಅಗತ್ಯ ಯೋಜನೆಗಳನ್ನು ಘೋಷಣೆ ಮಾಡಬೇಕು.

    ಕಾರ್ಮಿಕರ ಹಕ್ಕುಗಳಿಗೆ ಧ್ವನಿಯಾಗಬೇಕು. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮೃತರ ಪರಿಹಾರ ಕೊಡುವುದನ್ನು ಸರಳೀಕರಿಸಬೇಕು. ಪಿಂಚಣಿ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

    ಕಾರ್ಮಿಕರಾದ ವಿರೂಪಾಕ್ಷಪ್ಪ ಭಂಡಾರಿ, ದೇವಪ್ಪ ಗುಡದಳ್ಳಿ, ತಿರುಪತಿ ಮಾನ್ವಿ, ರಾಜಪ್ಪ ಗುಡದಳ್ಳಿ, ಮಹಾಂತೇಶ ಆರಬೆರಳಿನ್, ಮಲ್ಲು ಗೊರ್ಲೆಕೊಪ್ಪ, ಅಂಜನಪ್ಪ ಬಾರಿಗಿಡದ್, ಶಿವಪ್ಪ, ಪರಸಪ್ಪ, ನಿಂಗಪ್ಪ ಗುನ್ನಾಳ, ಫಕೀರಪ್ಪ ಗೊರ್ಲೆಕೊಪ್ಪ, ಮುದಿಯಪ್ಪ, ದೊಡ್ಡ ಈರಪ್ಪ ಆರುಬೆರಳಿನ, ಬಸವರಾಜ ಅಣ್ಣಿಗೇರಿ, ರಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts