More

    ಆನ್‌ಲೈನ್‌ನಲ್ಲಿ 21 ಲಕ್ಷ ರೂ. ವಂಚನೆ

    ಕುಕನೂರು: ಪಟ್ಟಣದ ನಿವಾಸಿ ಶಿಕ್ಷಕ ಶಿವಕುಮಾರ ಮುತ್ತಾಳ ಅವರ ಪತ್ನಿ ಭುವನೇಶ್ವರಿ ಮುತ್ತಾಳ ಅವರು ಆನ್‌ಲೈನ್ ಟೆಲಿಗ್ರಾಂ ಆ್ಯಪ್‌ನ ಮೋಸದ ಜಾಲಕ್ಕೆ ಸಿಲುಕಿ ಬರೋಬ್ಬರಿ 21 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ವರದಿ ತಡವಾಗಿ ಬೆಳಕಿಗೆ ಬಂದಿದೆ.

    ಅಪರಿಚಿತ ವ್ಯಕ್ತಿಗಳು ಟೇಲಿಗ್ರಾಂ ಆ್ಯಪ್ ಮೂಲಕ ಪರಿಚಯವಾಗಿ ದಿನಕ್ಕೆ 1 ರಿಂದ 3 ಗಂಟೆ ಮನೆಯಲ್ಲೇ ಕೆಲಸ ಮಾಡಿದರೆ 2600 ರೂ. ನಿಂದ 4200 ರೂ.ವರೆಗೆ ಗಳಿಸಬಹುದೆಂಬ ಆಮಿಷ ಒಡ್ಡಿದ್ದು, ಇದಕ್ಕೆ ಭುವನೇಶ್ವರಿ ಬಲಿಯಾಗಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಆನ್‌ಲೈನ್ ಖದೀಮರು, ಭುವನೇಶ್ವರಿ ಮತ್ತು ಅವರ ಅಜ್ಜನವರಾದ ನಿವೃತ್ತ ಕೃಷಿ ಅಧಿಕಾರಿ ಬ್ಯಾಂಕ್ ಖಾತೆಗಳಿಂದ ಒಟ್ಟು 21,60,692 ರೂ. ದೋಚಿ ತಮ್ಮ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ವಂಚನೆಗೆ ಒಳಗಾದ ಭುವನೇಶ್ವರಿಗೆ ಮೊದಮೊದಲು ಖದೀಮರು ಹಣವನ್ನು ಖಾತೆಗೆ ಹಾಕಿದ್ದಾರೆ. ನಂತರ ನೀವು ನಿಮ್ಮ ಖಾತೆಗೆ ಇಷ್ಟು ಹಣ ಹಾಕಿದರೆ ಅದು ದುಪ್ಪಟ್ಟು ಆಗಿ ಬರುತ್ತದೆ ಎಂದು ಆಮಿಷ ಒಡ್ಡಿದ್ದಾರೆ.

    ಅಲ್ಲದೆ ಆನ್‌ಲೈನ್‌ನಲ್ಲಿ ಒಂದು ಖಾತೆ ಸಹ ಸೃಜಿಸಿ ನಿಮ್ಮ ಹಣ ಡ್ರಾಪ್ಟ್ ಅಕೌಂಟ್‌ನಲ್ಲಿ ಇದೆ. ನೀವು ಇನ್ನೂ 7 ಲಕ್ಷ ರೂ. ಭರಿಸಿದರೆ ನಿಮಗೆ 45 ಲಕ್ಷ ರೂ.ಬರುತ್ತದೆ ಎಂದು ಆಸೆ ಹುಟ್ಟಿಸಿದ್ದಾರೆ. ಹೀಗೆ ಪದೇ ಪದೇ ಹಣ ಕೇಳುತ್ತಿದ್ದರಿಂದ ಭುವನೇಶ್ವರಿ ಅನುಮಾನಗೊಂಡು ತಮ್ಮ ಪತಿ ಶಿವಕುಮಾರ್‌ಗೆ ಹಾಗೂ ಅವರ ಅಜ್ಜನವರಿಗೆ ವಿಷಯ ತಿಳಿಸಿದ್ದಾರೆ. ಕಣ್ಣೀರಿಟ್ಟು ತಾವು ಮೋಸ ಹೋದ ಬಗೆಯನ್ನು ಕುಟುಂಬದವರ ಬಳಿ ವಿವರಿಸಿದ್ದಾರೆ. ನಂತರ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts