More

    ಬಾಬಣ್ಣರ ರಂಗಭೂಮಿ ಸೇವೆ ಶ್ಲಾಘನೀಯ -ಸಾಹಿತಿ ಬಸವರಾಜ ಬಿನ್ನಾಳ

    ಕುಕನೂರು: ರಂಗಭೂಮಿ ಕಲೆಯನ್ನು ಕರಗತ ಮಾಡಿಕೊಂಡು, ಇಡೀ ಜೀವನವನ್ನೇ ಅದರ ಸೇವೆಗೆ ಮುಡುಪಾಗಿಟ್ಟ ಬಾಬಣ್ಣರ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಬಸವರಾಜ ಬಿನ್ನಾಳ ಹೇಳಿದರು.

    ಪಟ್ಟಣದ ಬಾಬಣ್ಣ ಕಲ್ಮನಿಗೆ ‘ಗುಬ್ಬಿ ವೀರಣ್ಣ ಪ್ರಶಸ್ತಿ’ ಲಭಿಸಿದ್ದರಿಂದ ತಾಲೂಕು ಕಸಾಪದಿಂದ ಸೋಮವಾರ ಸನ್ಮಾನಿಸಿ ಮಾತನಾಡಿದರು. ಬಾಬಣ್ಣ ಬಾಲ್ಯದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ. ತಾಯಿ ರೆಹಮಾನಮ್ಮ ಜತೆ ಬಣ್ಣದ ಲೋಕದಲ್ಲಿ ರಂಗಭೂಮಿಯ ರಾಜಕುಮಾರರಾಗಿ ಮಿಂಚಿದ್ದಾರೆ. ಸತತ 70 ವರ್ಷಗಳ ಕಾಲದಿಂದಲೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಸರ್ಕಾರ ತಡಮಾಡಿ ಗುರುತಿಸಿದೆ. ಇವರ ಈ ಸಾಧನೆಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

    ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ಪ್ರಧಾನ ಕಾರ್ಯದರ್ಶಿ ಪೀರ್‌ಸಾಬ್ ದಫೇದಾರ, ಪತ್ರಕರ್ತ ಬಸವರಾಜ ಕೊಡ್ಲಿ, ಶಿಕ್ಷಕರಾದ ಉಮೇಶ ಕಂಬಳಿ, ಹನಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts