More

    ಕೂಡ್ಲು ಜಲಪಾತ ಪ್ರವೇಶ ಶುಲ್ಕ ಯಥಾಸ್ಥಿತಿ

    ಉಡುಪಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯದಲ್ಲಿರುವ ಕೂಡ್ಲು ಜಲಪಾತ ಪ್ರವೇಶ ಶುಲ್ಕವನ್ನು ಹೆಚ್ಚಿಸಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು, ಆದೇಶವನ್ನು ಸರ್ಕಾರ ಹಿಂಪಡೆದು ಎಂದಿನ ಶುಲ್ಕ ದರ 50 ರೂ.,ನಿಗದಿಪಡಿಸಲಾಗಿದೆ.

    ಕರೊನಾ ಲಾಕ್‌ಡೌನ್ ಮೊದಲು ಪ್ರವಾಸಿಗರಿಂದ ಕೂಡ್ಲು ಫಾಲ್ಸ್‌ಗೆ ಒಬ್ಬರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ಪ್ರವೇಶ ಶುಲ್ಕವಿತ್ತು. ನಂತರ ಕೋವಿಡ್ ಭೀತಿಯಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ನವೆಂಬರ್ ಮೊದಲ ವಾರದಲ್ಲಿ ಮತ್ತೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಶುಲ್ಕವನ್ನು 200 ರೂಪಾಯಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಭಾರತೀಯರಿಗೆ 200 ರೂ., ಮಕ್ಕಳಿಗೆ 175 ರೂ., ವಿದೇಶಿಗರಿಗೆ ಒಬ್ಬರಿಗೆ 250ರೂ. ಪ್ರವೇಶ ಶುಲ್ಕ ಏರಿಕೆ ಮಾಡಲಾಗಿತ್ತು. ಈ ಕ್ರಮಕ್ಕೆ ಸ್ಥಳೀಯರು, ಪ್ರವಾಸಿಗರಿಂದ ಆಕ್ಷೇಪ ವ್ಯಕ್ತವಾಗಿತ್ತು.

    ಕೂಡ್ಲು ಜಲಪಾತ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಈ ಹಿಂದಿನ ಶುಲ್ಕ 50 ರೂಪಾಯಿಗೆ ಇಳಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಪ್ರವಾಸಿ ತಾಣಗಳಲ್ಲಿ ಪ್ರತಿವರ್ಷದಂತೆ ಶುಲ್ಕ ಹೆಚ್ಚಳ ಮಾಡಲಾಗುತ್ತದೆ. ಅದರಂತೆ ಇಲ್ಲಿಯೂ ಮಾಡಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಹಿಂದಿನ ದರವನ್ನೇ ಪಡೆಯಲು ಹೇಳಿದ್ದೇನೆ. ಕೂಡ್ಲು ಜಲಪಾತದಲ್ಲಿ ಡ್ರೆಸ್ಸಿಂಗ್ ಕೋಣೆ ಮತ್ತು ಶೌಚಗೃಹ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಕೊಡಲಾಗಿದ್ದು, ಶೀಘ್ರ ನಿರ್ಮಾಣವಾಗಲಿದೆ.
    ಸುನೀಲ್ ಕುಮಾರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts