More

    ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಬಹಿಷ್ಕಾರ ; ಮೀಟಿಂಗ್‌ಹಾಲ್‌ನಿಂದ ಹೊರನಡೆದ ವಾಲ್ಮೀಕಿ ಸಮುದಾಯದ ಮುಖಂಡರು ಎಸ್‌ಟಿ ಮೀಸಲಾತಿ ಶೇ.7.5ಗೆ ಹೆಚ್ಚಿಸದಿರುವುದಕ್ಕೆ ಆಕ್ರೋಶ

    ಕೂಡ್ಲಿಗಿ: ಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನು ಶೇ.7.5ಗೆ ಹೆಚ್ಚಳ ಮಾಡದ ಸರ್ಕಾರದ ಕ್ರಮ ಖಂಡಿಸಿ, ವಾಲ್ಮೀಕಿ ಸಮುದಾಯದ ಮುಖಂಡರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಿಂದ ಹೊರನಡೆದು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಪ.ವರ್ಗಗಳ ಇಲಾಖೆ ಶನಿವಾರ ಸಭೆ ಆಯೋಜಿಸಿತ್ತು. ತಹಸೀಲ್ದರ್ ಟಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಸಮುದಾಯದ ಮುಖಂಡರೂ ಆದ ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ ಮಾತಾನಾಡಿ, ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸುವವಂತೆ ಒತ್ತಾಯಿಸಿ ವಾಲ್ಮೀಕಿ ಗುರುಗಳಾದ ಪ್ರಸನ್ನಾನಂದ ಸ್ವಾಮೀಜಿ ಸತ್ಯಾಗ್ರಹ ಆರಂಭಿಸಿ 250ಕ್ಕೂ ಹೆಚ್ಚು ದಿನಗಳು ಕಳೆದಿವೆ. ಸರ್ಕಾರ ಸ್ಪಂದಿಸುತ್ತಿಲ್ಲ. ಸಮುದಾಯದ ಗುರುಗಳು ಸತ್ಯಾಗ್ರಹ ಮಾಡುತ್ತಿರುವಾಗ ಜಯಂತಿ ಆಚರಣೆಯ ಔಚಿತ್ಯವಾದರೂ ಏನು. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಅಧಿಕಾರಿಗಳು ಸಭೆ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಆದರೆ, ನಾವು ಸಮಾಜದವರು ಇದಕ್ಕೆ ಬಹಿಷ್ಕಾರ ಹಾಕುತ್ತೇವೆ. ಈ ಬಗ್ಗೆ ಠರಾವು ಹೊರಡಿಸಿ, ಹಿರಿಯ ಅಧಿಕಾರಿಗಳಿಗೆ ತಿಳಿಸಿ ಎಂದು ಒತ್ತಾಯಿಸಿದರು. ನಂತರ ಸಮುದಾಯದ ಎಲ್ಲರೂ ಸಭೆಯಿಂದ ಹೊರ ನಡೆದರು.

    ತಹಸೀಲ್ದರ್ ಟಿ.ಜಗದೀಶ್ ಮಾತಾನಾಡಿ, ಸಮಾಜದ ಮುಖಂಡರ ವಿಶ್ವಾಸವಿಲ್ಲದೆ ಜಯಂತಿ ಆಚರಣೆ ಮಾಡುವುದು ಕಷ್ಟಸಾಧ್ಯ. ವಾಲ್ಮೀಕಿ ಜಯಂತಿ ಮುಂದಿನ ತಿಂಗಳು 9ರಂದು ಇದೆ. ಈ ಕುರಿತು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಮಾಜದ ಮುಖಂಡರಾದ ಸೂರ್ಯಪಾಪಣ್ಣ, ಬಿ.ಭೀಮೇಶ್, ರಾಘವೇಂದ್ರ, ಕೆ.ಈಶಪ್ಪ, ಸಿರಬಿ ಮಂಜುನಾಥ, ಪಂಪಾಪತಿ, ನಲ್ಲಮುತ್ತಿ ದುರುಗೇಶ್, ಸೊಲ್ಲೇಶ್,ಬಿ.ಕೆ.ರಾಘವೇಂದ್ರ, ಹೊನ್ನೇಶ್, ಬಾಣದ ಮೂರ್ತಿ, ಅಜೇಯ್, ರಮೇಶ್, ಎಸ್.ದುರುಗೇಶ್, ಜಿ.ಬಸವರಾಜ, ಹನುಮಂತಪ್ಪ, ಜಯರಾಂ ನಾಯಕ, ಯು.ಪೆನ್ನಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts