More

    ಮತೀಯ ಸಂಘಟನೆಗಳನ್ನು ಬ್ಯಾನ್ ಮಾಡಿ

    ಕೂಡ್ಲಿಗಿ: ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ ಹರ್ಷ ಸಾವು ಹಾಗೂ ಹಿಂದುಗಳನ್ನು ಹತ್ಯೆ ಮಾಡುವವರನ್ನ ಗಡಿಪಾರು ಮಾಡಬೇಕು ಹಾಗೂ ಮತೀಯ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಹಿಂದು ಪರ ಸಂಘಟನೆಗಳಿಂದ ಆಗ್ರಹಿಸಲಾಯಿತು.

    ಹರ್ಷ ಸಾವು ಅಮಾನವೀಯವಾಗಿದ್ದು ಹಿಂದು ಸಮಾಜಕ್ಕೆ ದೊಡ್ಡ ಆಘಾತವಾಗಿದೆ. ಇದರಿಂದ ಹಿಂದುಗಳಲ್ಲಿ ಭಯ ಹಾಗೂ ಅಸುರಕ್ಷತೆ ಭಾವನೆ ಕಾಡುತ್ತಿದೆ. ಸಂಘಟನೆಗಳಾದ ಪಿಎ್ಐ, ಸಿಎ್ಐ ಹಾಗೂ ಎಸ್‌ಡಿಪಿಐ ಮುಂತಾದವುಗಳು ಕೆಲ ವರ್ಷಗಳಿಂದ ಹಿಂದುಗಳನ್ನು ಗುರಿಯಾಗಿಸಿ ನಿರಂತರವಾಗಿ ಕಗ್ಗೊಲೆ ಮಾಡುತ್ತಿವೆ. ಇವರಿಗೆ ಕಾನೂನಿನ ಭಯ ಇಲ್ಲವಾಗಿದೆ. ಆದ್ದರಿಂದ ಹರ್ಷರ ಸಾವಿಗೆ ಕಾರಣರಾದವರಿಗೆ ಜೀವಾವದಿ ಶಿಕ್ಷೆ, ಮೂಲಭೂತವಾದಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಕೊಲೆಯಾದ ಯುವಕನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಟಿ.ಜಗದೀಶ್ ಮನವಿ ಸ್ವೀಕರಿಸಿದರು.

    ಹಿಂದುಪರ ಸಂಘಟನೆಗಳ ಮುಖಂಡರಾದ ಮಂಜುನಾಥ್, ಮಾಳ್ಗಿ ಗುರು, ಚೆನ್ನಪ್ಪ, ಪಾಪನಾಯಕ, ರಮೇಶ್, ಅಜೇಯ್, ಅನಂತಪದ್ಮನಾಭ, ವಾಗೀಶ ಮೂರ್ತಿ, ಸತೀಶ್, ಸುನೀಲ್, ಸಂದೀಪ್, ಪವಿತ್ರಾ, ಶೋಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts