More

    ಸರ್ಕಾರಿ ಸೌಲತ್ತು ಸದುಪಯೋಗವಾಗಲಿ

    ಕೂಡ್ಲಿಗಿ: ಸರ್ಕಾರ ಕೊಡುವ ಸೌಲತ್ತುಗಳನ್ನು ರೈತರು ಬಳಸಿಕೊಂಡು ಬಳಸಿಕೊಂಡು, ಕಡಿಮೆ ನೀರು ಬಳಸಿ, ವಿಜ್ಞಾನಿಗಳ ಸಲಹೆಯಂತೆ ತಾಂತ್ರಿಕ ಬೇಸಾಯ ಮಾಡಗಬೇಕು ಎಂದು ಪಪಂ ಉಪಾಧ್ಯಕ್ಷೆ ರೇಣುಕಾ ದುರುಗೇಶ್ ಹೇಳಿದರು.

    ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆ ಏರ್ಪಡಿಸಿದ್ದ ರೈತ ದಿನಾಚರಣೆಯಲ್ಲಿ ರೈತರನ್ನು ಸನ್ಮಾನಿಸಿ, ಮಾತಾನಾಡಿದರು. ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣಕ್ಕೆ ವಲಸೆ ಹೋಗಬಾರದು. ಬದಲಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು, ವಿಜ್ಞಾನಿಗಳ ಸಲಹೆಯಂತೆ ಕೃಷಿ ಮಾಡಿ, ಉತ್ಪನ್ನಗಳನ್ನು ನೇರ ಮಾರುಕಟ್ಟೆಗೆ ತಂದ ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯಗಳಿಸಬಹುದು ಎಂದರು. ಕೃಷಿಯನ್ನು ಲಾಭದಾಯಕ ಮಾಡಲು ಸಮುದಾಯದ ಎಲ್ಲರೂ ಕೈಜೋಡಿಸಬೇಕು ಎಂದರು. ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ಅನ್ನದಾತರನ್ನು ಸ್ಮರಿಸಿ ಊಟ ಮಾಡಬೇಕಿದೆ. ಆದರೆ, ಅನ್ನದಾತನಿಗೆ ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ಸಂಕಷ್ಟ ಎದುರಿಸಿ, ಸಾಲದ ಶೂಲಕ್ಕೆ ಬಲಿಯಾಗುತ್ತಿರುವುದು ನಾವು ದಿನನಿತ್ಯ ನೋಡುತ್ತಿದ್ದೇವೆ. ಸರ್ಕಾರ ಆ ನಿಟ್ಟಿನಲ್ಲಿ ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅವರ ಬೆನ್ನಿಗೆ ನಿಲ್ಲಬೇಕಿದೆ. ಅದರಂತೆ ಅವರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಿ ಬೆಳೆದ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ನೀಡಿ ಅವರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. ಸರ್ಕಾರ ಸೂಕ್ತ ಬೆಂಬಲ ಬೆಲೆ ಹಾಗೂ ವ್ಯವಸ್ಥಿತ ಮಾರುಕಟ್ಟೆಯನ್ನು ಒದಗಿಸಿ ರೈತರ ಬಾಳಿಗೆ ಬೆಳಕಾಗಬೇಕು ಎಂದರು.

    ರೈತ ಮುಖಂಡ ದೇವರಮನೆ ಮಹೇಶ್,ಕೆ.ಕೃಷ್ಣ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎರಿಸ್ವಾಮಿ, ಜಂಬಣ್ಣ, ಕೃಷಿ ತಾಂತ್ರಿಕ ಅಧಿಕಾರಿ ನೀಲಾ ನಾಯ್ಕ, ಕೃಷಿ ಅಧಿಕಾರಿಗಳಾದ ಪುಷ್ಪಾ ಅಳ್ನಾವರ, ಚೈತ್ರಾ, ಗುರುಬಸವರಾಜ್, ಸಾಬೋಜಿ, ರಮೇಶ್, ತಾಂತ್ರಿಕ ವ್ಯವಸ್ಥಾಪಕ ಶ್ರವಣ್ ಕುಮಾರ್, ರಾಮಕೃಷ್ಣ, ಗೌತಮ್ ಇತರರಿದ್ದರು. ಇದೇ ವೇಳೆ ಶ್ರೇಷ್ಠ ಕೃಷಿಕರು, ಕೃಷಿಕ ಮಹಿಳೆಯರನ್ನು ಸನ್ಮಾನಿಸಿಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts