More

    ರೈತರಿಗೆ ಬೆಳೆ ವಿಮೆ ಮಂಜೂರು ಮಾಡಿ; ತಹಸೀಲ್ದಾರ್ ಟಿ.ಜಗದೀಶ್‌ಗೆ ಮನವಿ

    ಕೂಡ್ಲಿಗಿ: ಮಳೆ ಇಲ್ಲದೆ ಅಪಾರ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಿ, ತಾಲೂಕನ್ನು ಬರ ಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ

    ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಟಿ.ಜಗದೀಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಬೆಳೆಹಾನಿ ವೀಕ್ಷಣೆ, ಮಕ್ಕಳೊಂದಿಗೆ ಸಂವಾದ

    ರೈತ ಸಂಘದ ರಾಜ್ಯ ಪ್ರ. ಕಾರ್ಯದರ್ಶಿ ದೇವರಮನಿ ಮಹೇಶ್ ಮಾತನಾಡಿ, ಮಳೆ ಕೊರತೆಯಿಂದ ಮೆಕ್ಕೆಜೋಳ, ಸಜ್ಜೆ, ಶೇಂಗಾ ಬೆಳೆಗಳು ಒಣಗಿದ್ದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

    ತಾಲೂಕನ್ನು ಬರ ಪೀಡಿತವೆಂದು ಘೋಷಿಸಿ ಎಕರೆಗೆ 40 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು.

    ಬೆಳೆ ಸಮೀಕ್ಷೆ ಕೈಗೊಂಡು ಬೆಳೆ ವಿಮೆ ಮಂಜೂರು ಮಾಡಬೇಕು. ತಾಲೂಕಿಗೆ ನರೇಗಾ ಯೋಜನೆ ಮೂಲಕ 200 ದಿನ ಕೆಲಸ ಒದಗಿಸಬೇಕು. 150 ವರ್ಷಗಳಿಂದ ಸರ್ಕಾರಿ ಭೂಮಿ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸದೇ ಸಾಗುವಳಿ ರೈತರಿಗೆ ಪಟ್ಟ ನೀಡಬೇಕು. ಕೂಡ್ಲಿಗಿ ತಾಲೂಕು ಹಾಗೂ ರಾಜ್ಯದ ಎಲ್ಲ ಕೃಷಿ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

    ಸಂಘದ ತಾಲೂಕು ಕಾರ್ಯಾಧ್ಯಕ್ಷ ಕಾಟೇರ್ ಶೇಷಪ್ಪ, ತಾಲೂಕು ಉಪಾಧ್ಯಕ್ಷ ಪಿ.ಖಾಸೀಂ ಸಾಬ್, ಪ್ರಮುಖರಾದ ಕೆ.ಶಿನಪ್ಪ, ಚೌಡಪ್ಪ, ಎಂ.ಮಂಜುನಾಥ, ಅಬ್ದುಲ್ ಹನನ್, ಕೆ.ಮಹೇಶ್, ಆರ್.ಮಹೇಶ್ವರಪ್ಪ, ಬಸಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts