More

    ಡಿ.3ರಂದು ‘ಕುಡ್ಲ ರನ್ಸ್ ಫಾರ್ ನೋ ಡ್ರಗ್ಸ್’ ಮ್ಯಾರಥಾನ್

    ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವತಿಯಿಂದ ಎಸ್‌ಜೆಇಸಿ ಹಳೇ ವಿದ್ಯಾರ್ಥಿಗಳ ಸಂಘ, ಎಸ್‌ಜೆಇಸಿ ಫೌಂಡೇಶನ್, ಡಯೋಸಿಸನ್ ಕಮಿಷನ್ ಫಾರ್ ಹೆಲ್ತ್ ಮತ್ತು ವೀ ಆರ್ ಸೈಕ್ಲಿಂಗ್‌ನ ಸಹಯೋಗದಲ್ಲಿ ಡಿ.3ರಂದು ಡ್ರಗ್ಸ್ ಜಾಗೃತಿಗಾಗಿ ಮತ್ತು ಮಾದಕ ವ್ಯಸನ ಮುಕ್ತ ಜೀವನಶೈಲಿಯನ್ನು ಉತ್ತೇಜಿಸಲು ‘ಕುಡ್ಲ ರನ್ಸ್ ಫಾರ್ ನೋ ಡ್ರಗ್ಸ್’ ಮ್ಯಾರಥಾನ್ ಆಯೋಜಿಸಲಾಗಿದೆ.

    ಫನ್ ರನ್, 5 ಕಿ.ಮೀ. ಓಟ, 15 ಕಿ.ಮೀ ಓಟದ ಮ್ಯಾರಥಾನ್ ಮತ್ತು ಸೈಕ್ಲೋಥಾನ್ ನಡೆಯಲಿದ್ದು ವಿಜೇತರಿಗೆ ಒಟ್ಟು 3 ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುವುದು. 15 ಕಿ.ಮೀ ಮ್ಯಾರಥಾನ್ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಿಂದ ಬೆಳಗ್ಗೆ 6ಕ್ಕೆ ಆರಂಭಗೊಳ್ಳಲಿದೆ. ಆ ಬಳಿಕ 5 ಕಿ.ಮೀ ಓಟ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಿಂದ ಹಾಗೂ 2 ಕಿ.ಮೀ ಓಟ(ಫನ್ ರನ್) ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಿಂದ ಆರಂಭಗೊಳ್ಳಲಿದೆ. ಎಲ್ಲ ವಿಭಾಗಗಳ ಮ್ಯಾರಥಾನ್ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮೈದಾನದಲ್ಲಿ ಸಮಾಪನಗೊಳ್ಳಲಿದೆ ಎಂದು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ರಿಯೋ ಡಿಸೋಜ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಮಾರೋಪ ಸಮಾರಂಭದಲ್ಲಿ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮುಂತಾದವರು ಭಾಗವಹಿಸಲಿದ್ದಾರೆ. ನೋಂದಣಿಗಾಗಿ (ಠಿಜ್ಞಿಢ್ಠ್ಟ್ಝ.್ಚಟಞ/ಝ್ಠಛ್ಝಚ್ಟ್ಠ್ಞ)ಲಿಂಕ್ ಬಳಸಬಹುದು. ಆಸಕ್ತರು ನ.26ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಮ್ಯಾರಥಾನ್‌ನಲ್ಲಿ 1,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

    ಎಸ್‌ಜೆಇಸಿಯ ಎಚ್‌ಆರ್ ಮ್ಯಾನೇಜರ್ ರಾಕೇಶ್ ಲೋಬೊ, ಸಹಾಯಕ ಪ್ರಾಧ್ಯಾಪಕ ವಿನೂತನ್ ಕಲಿವೀರ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನೆಲ್ಸನ್ ಕ್ಯಾಸ್ಟಲಿನೊ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ.ನಾಗೇಶ್ ಕೆ.ಆರ್, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕ ಹೆನ್ರಿ ಮಸ್ಕರೇನಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts