More

    ಕಾನೂನು ಗೌರವಿಸುವವರನ್ನು ಅದು ರಕ್ಷಿಸುತ್ತದೆ: ಡಿವೈಎಸ್ಪಿ ಜಿ.ಹರೀಶ್ ಅಭಿಮತ

    ಕೂಡ್ಲಿಗಿ: ಕಾನೂನನ್ನು ಗೌರವಿಸುವವರನ್ನು ಅದು ರಕ್ಷಿಸುತ್ತದೆ ಎಂದು ಡಿವೈಎಸ್ಪಿ ಜಿ.ಹರೀಶ್ ಹೇಳಿದರು. ಪಟ್ಟಣದ ಹಿರೇಮಠ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಪೋಲಿಸ್ ಇಲಾಖೆ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.

    ಪೋಲಿಸ್ ಇಲಾಖೆ ತುಂಬಾ ಬದಲಾಗಿದ್ದು, ಈಗ ಜನ ಸ್ನೇಹಿಯಾಗಿದೆ.ಪೋಲಿಸರ ಬಗ್ಗೆ ಯಾರಿಗೂ ಭಯ ಬೇಡ. ನಾವು ಖಾಕಿ ಧಾರಿ ಪೋಲಿಸರಾದರೆ, ಜನರು ಖಾಕಿ ಧರಿಸದ ಪೋಲಿಸರು. ಇಬ್ಬರೂ ಸೇರಿಕೊಂಡು ಕಾನೂನು ಪಾಲಿಸಬೇಕು. ಜನ ಕಾನೂನನ್ನು ಗೌರವಿಸಿದರೆ ಪೋಲಿಸರಿಗೆ ಕೆಲಸವೇ ಇರುವುದಿಲ್ಲ. ಕ್ಷಮಿಸಲಾರದ ತಪ್ಪಿಗೆ ಶಿಕ್ಷೆ ಖಂಡಿತ ಇದೆ ಎಂದರು.

    ಹದಿಹರೆಯದ ವಿಧ್ಯಾರ್ಥಿಗಳು ದುರ್ವ್ಯಸನದ ಗೀಳಿಗೆ ಬಲಿಯಾಗಬಾರದು. ಉತ್ತಮ ಜ್ಞಾನಾರ್ಜನೆ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕು. ಉತ್ತಮ ಸಂಸ್ಕಾರ ಪಡೆಯಬೇಕು. ವಿಧ್ಯಾರ್ಥಿನಿಯರು ಅನಾಮಧೇಯ ವ್ಯಕ್ತಿಗಳು ಮೊಬೈಲ್ ಮೂಲಕ ತೋರುವ ಸ್ನೇಹ, ಪ್ರೀತಿ, ಆಮಿಷಗಳಿಗೆ ಬಲಿಯಾಗಬಾರದು. ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದರು.

    ವಕೀಲ ಸಿ.ವಿರೂಪಾಕ್ಷಪ್ಪ ಮಾತಾನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಕೂಡ್ಲಿಗಿ ಹಿರೇಮಠದ ಷ.ಬ್ರ.ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮುರಳೀಧರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಬಡಿಗೇರ ನಾಗರಾಜ, ಪದಾಧಿಕಾರಿಗಳಾದ ಸಾಲುಮನಿ ರಾಘವೇಂದ್ರ, ಎಚ್.ತಿಪ್ಪೇಸ್ವಾಮಿ, ಗುನ್ನಳ್ಳಿ ರಾಘವೇಂದ್ರ,ಹುಡೇಂ ಮಂಜುನಾಥ, ಕೆ.ತಿಪ್ಪೇಸ್ವಾಮಿ, ಜೆ.ಸೊಲ್ಲೇಶ,ತಿಪ್ಪೇಹಳ್ಳಿ ಮಾರೇಶ, ಎ.ಎಂ.ಬಸವರಾಜ ಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts