More

    ಗಾಂಧೀಜಿ ತತ್ವಗಳು ಇಂದಿಗೂ ಪ್ರಸ್ತುತ

    ಹುಬ್ಬಳ್ಳಿ : ಮಹಾತ್ಮಾ ಗಾಂಧೀಜಿ ಅವರು ‘ಮಹಾನ್ ಆತ್ಮ’. ಅವರ ಸಿದ್ಧಾಂತಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತ ಹಾಗೂ ಪ್ರಪಂಚದಾದ್ಯಂತ ಜನಪ್ರೀಯಗೊಂಡಿವೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಹೇಳಿದರು.

    ಇಲ್ಲಿನ ಕಾನೂನು ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್​ಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಹಾತ್ಮಾ ಗಾಂಧೀಜಿಯವರು ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮತ್ತು ಬದ್ದತೆಯ ಮಾರ್ಗಗಳಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಾವ ರೀತಿ ಯಶಸ್ವಿಯಾದರು ಹಾಗೂ ಮಾಜಿ ಪ್ರಧಾನಿ ಲಾಲ್​ಬಹಾದ್ದೂರ ಶಾಸ್ತ್ರೀಯವರ ಕೊಡುಗೆಯನ್ನು ಸ್ಮರಿಸಿದರು.

    ಈಗಿನ ಸಮಾಜದಲ್ಲಿ ಜಾತಿ ತಾರತಮ್ಯ, ಲಿಂಗ ತಾರತಮ್ಯ, ಅಧಿಕಾರದ ಲಾಲಸೆ, ದ್ವೇಷ, ಅಸೂಹೆ, ದುರಾಡಳಿತ , ಭ್ರಷ್ಟಾಚಾರಗಳೆಂಬ ಮಾರಕ ಅಂಶಗಳು ದೇಶದ ಶಾಂತಿಯನ್ನು ಕದಡುವಲ್ಲಿ ಗುರುತರ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮತ್ತು ಬದ್ದತೆಯ ಮಾರ್ಗಗಳನ್ನು ಮೈಗೂಡಿಸಿಕೊಂಡಿದ್ದೆಯಾದಲ್ಲಿ ಸಮಾಜದಲ್ಲಿ ಶಾಂತಿ ನೆಲೆಗೊಂಡು, ದೇಶದ ಅಭಿವೃದ್ದಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

    ಕಾನೂನು ವಿವಿ ಕುಲಸಚಿವರಾದ ಅನುರಾಧಾ ವಸ್ತ್ರದ, ಡೀನ್ ಡಾ. ಜಿ.ಬಿ. ಪಾಟೀಲ, ಸಿಂಡೀಕೆಟ್ ಸದಸ್ಯ ವಸಂತ ಲದ್ವಾ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts