More

    19ಕ್ಕೆ ಕ್ಷೇಮಾ ಆಸ್ಪತ್ರೆ ಐವಿಎಫ್ ವಾರ್ಷಿಕೋತ್ಸವ

    ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ, ಫರ್ಟಿಲಿಟಿ ಮತ್ತು ರಿಪ್ರೊಡಕ್ಟಿವ್ ಮೆಡಿಸಿನ್ ಸೆಂಟರ್(ಐವಿಎಫ್), ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ 10ನೇ ವಾರ್ಷಿಕೋತ್ಸವ ಪ್ರಯುಕ್ತ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಏ.19ರಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆವಿಷ್ಕಾರ್ ಸಭಾಂಗಣದಲ್ಲಿ ನಡೆಯಲಿದೆ.

    2013ರ ಡಿಸೆಂಬರ್‌ನಲ್ಲಿ ಕ್ಷೇಮಾದಲ್ಲಿ ಐವಿಎಫ್ ಲ್ಯಾಬ್ ಅತ್ಯಾಧುನಿಕ ಪ್ರಯೋಗಾಲಯ ಆರಂಭಗೊಂಡಿದ್ದು, ಕೈಗೆಟಕುವ ದರದಲ್ಲಿ ಮಕ್ಕಳಿಲ್ಲದ ದಂಪತಿಯ ಸೇವೆಯಲ್ಲಿ ಯಶಸ್ವಿಯಾಗಿ ಒಂದು ದಶಕ ಪೂರೈಸಿದೆ. ಲೇಸರ್ ಮೂಲಕ ಐವಿಎಫ್ ಸೇವೆ ಆರಂಭಿಸಿದ ಮಂಗಳೂರಿನ ವೈದ್ಯಕೀಯ ಕಾಲೇಜುಗಳ ಪೈಕಿ ಈ ಕೇಂದ್ರ ಪ್ರಥಮ ಎನಿಸಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಯಾವುದೇ ಜೀವ-ವಿಜ್ಞಾನ ಪದವೀಧರರಿಗೆ ಕೇಂದ್ರದಿಂದ ನಾಲ್ಕು ಸೆಮಿಸ್ಟರ್‌ಗಳ(2 ವರ್ಷ) ಕ್ಲಿನಿಕಲ್ ಎಂಬ್ರಿಯಾಲಜಿ ಪ್ರೋಗ್ರಾಂ ಪ್ರಾರಂಭಿಸಿದೆ. ಆಧುನಿಕ, ಸುಸಜ್ಜಿತ ತರಬೇತಿ ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದ್ದು, ಭವಿಷ್ಯದ ಭ್ರೂಣಶಾಸಉಜ್ಞರಿಗೆ ತರಬೇತಿ ನೀಡಲು ನುರಿತ ಶಿಕ್ಷಕರನ್ನು ಹೊಂದಿದೆ.

    19ರ ಕಾರ್ಯಕ್ರಮದಲ್ಲಿ ಯುನೈಟೆಡ್ ಕಿಂಗ್‌ಡಂನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ರಿಪ್ರೊಡಕ್ಟಿವ್ ಮೆಡಿಸಿನ್‌ನ ಮಾಜಿ ಮುಖ್ಯಸ್ಥ, ಐವಿಎಫ್ ತಜ್ಞ ಮತ್ತು ಬ್ರಿಟಿಷ್ ಫರ್ಟಿಲಿಟಿ ಸೊಸೈಟಿಯ ಅಧ್ಯಕ್ಷ ಪ್ರೊ.ಅಲಿಸನ್ ಮುರ್ಡೋಕ್ ಭಾಗವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಸಹಕುಲಾಧಿಪತಿ ಪ್ರೊ.ಎಂ.ಶಾಂತಾರಾಮ ಶೆಟ್ಟಿ, ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಉಪಸ್ಥಿತರಿರುವರು ಎಂದು ಕ್ಷೇಮ ಐವಿಎಫ್ ಪ್ರಯೋಗಾಲಯದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts