More

    ನನ್ನನ್ನು ಬಿಜೆಪಿಗೆ ಕರೆತಂದಿದ್ದೇ ಈಶ್ವರಪ್ಪ, ಆದ್ರೂ…., ಸಚಿವ ಸೋಮಣ್ಣ ಬುದ್ಧಿಮಾತು

    ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರಿನ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

    ಶಿವಮೊಗ್ಗದವರಾದ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಜಗಳ ಒಂದು ಹೆಜ್ಜೆ ಮುಂದೆ ಹೋಗಿದ್ದು ಒಳ್ಳೆಯದಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರು ಇದನ್ನು ಎರಡು ದಿನದಲ್ಲಿ ಸರಿಪಡಿಸುವ ವಿಶ್ವಾಸವಿದೆ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

    ಇದನ್ನೂ ಓದಿ: ಚುನಾವಣಾ ಕಣದಿಂದ ಹಿಂದೆ ಸರಿದ ಮಂಗಳಮುಖಿ: ನಂಬಿಸಿ ಮೋಸ ಮಾಡಿದರು ಎಂದು ಕಣ್ಣೀರಿಟ್ಟಳು

    ಯಡಿಯೂರಪ್ಪ ಸಿಎಂ ಆಗಬೇಕು ಅಂತ ನನ್ನನ್ನು ಬಿಜೆಪಿಗೆ ಕರೆತಂದಿದ್ದೇ ಈಶ್ವರಪ್ಪ. ಅವರಿಬ್ಬರೂ ಒಂದೇ ಜಿಲ್ಲೆಯವರು. ಒಂದ್ಕಡೆ ಕುಳಿತು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಾಲ್ಕು ಗೋಡೆಗಳ ನಡುವೆ ಯಾವ್ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ ಎಂದು ಸೋಮಣ್ಣ ಹೊಸ ಬಾಂಬ್ ಸಿಡಿಸಿದರು.

    ಈಶ್ವರಪ್ಪ ಹಿರಿಯರು, ಅನುಭವಿಗಳು. ನನಗಿಂತ ಬುದ್ಧಿವಂತರು. ಯಾವ ಕಾರಣಕ್ಕೆ ನೋವಾಗಿದೆ? ಹೀಗೇಕೆ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಬಿಎಸ್ವೈ ಏನು ಮಾಡಿದ್ದಾರೆ? ಈಶ್ವರಪ್ಪ ಏನು ಹೇಳಿದ್ದಾರೆ ಅನ್ನೋದೆಲ್ಲ ಗೊತ್ತಿದೆ. ಉಪಚುನಾವಣೆ ಮುಗಿದ ನಂತರ ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳುತ್ತೇವೆ. ಯಾರೂ ಬಹಿರಂಗ ಹೇಳಿಕೆ ನೀಡುವುದು ಬೇಡ ಎಂದು ಮನವಿ ಮಾಡಿದರು.

    ಸಿಡಿ ಲೇಡಿಯ ಪರ ವಕೀಲನಿಗೆ ಬಂತು ಕುತ್ತು… ವಕೀಲಿವೃತ್ತಿ ನಡೆಸುವ ಪರವಾನಗಿ ಆಯ್ತು ರದ್ದು!

    ‘ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್ ಹಾಕಿದ್ದಾರೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts