More

    ನಿಷೇಧದ ನಡುವೆಯೂ ದೇವಾಲಯ ಪ್ರವೇಶಿಸಿದ ಸಚಿವ, ಡಿಸಿ ಆದೇಶಕ್ಕಿಲ್ಲ ಕಿಮ್ಮತ್ತು?

    ಹನೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಜೂ.21ರವರೆಗೂ ಮಲೆ ಮಹದೇಶ್ವರ ದೇವಾಲಯಕ್ಕೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಸಚಿವರೊಬ್ಬರು ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಇಂದು ಬೆಳಗ್ಗೆ ದೇವರ ದರ್ಶನ ಪಡೆದಿದ್ದಾರೆ. ಇದರಿಂದ ಅಸಮಾಧಾನಗೊಂಡ ಭಕ್ತರು ಜನರಿಗೊಂದು- ಜನಪ್ರತಿನಿಧಿಗಳಿಗೊಂದು‌ ಕಾನೂನು ಇದೆಯೇ ಎಂದು ಟೀಕಿಸಿದ್ದಾರೆ.

    ಕೋವಿಡ್19 ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ದೇವಾಲಯಕ್ಕೆ ಜೂ.19ರಿಂದ 21ರವರೆಗೆ ಸಾರ್ವಜನಿಕರು ಹಾಗೂ ಭಕ್ತರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ರಾತ್ರಿ ಮ.ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ ಮುಂಜಾನೆ ಸ್ಥಳೀಯ ಶಾಸಕರೊಂದಿಗೆ ಮಹದೇಶ್ವರ ಸ್ವಾಮಿ‌ ದರ್ಶನ ಪಡೆದರು. ಇದನ್ನೂ ಓದಿರಿ ಹಣ್ಣು, ತರಕಾರಿ ಸಾಗಿಸುತ್ತಿದ್ದ ಚಾಲಕನಿಗೂ ಕರೊನಾ, ರಾತ್ರೋರಾತ್ರಿ ಸೀಲ್​ಡೌನ್​!

    ಸಚಿವರ ಜತೆ ಹನೂರು ಶಾಸಕ ನರೇಂದ್ರ ಸೇರಿ ನಾಲ್ಕೈದು ಜನರು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸಚಿವರು ಮತ್ತು ಅವರ ಬೆಂಬಲಿಗರು ಮಾಸ್ಕ್ ಧರಿಸದೆ ನಿಯಮ ಉಲ್ಲಘಿಸಿದರು. ಸಚಿವರು ನಿಷೇಧದ ನಡುವೆಯೂ ಮಲೆ‌ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಪಡೆದರು ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಜನರಿಗೊಂದು, ಜನಪ್ರತಿನಿಧಿಗಳಿಗೊಂದು ಕಾನೂನು ಜಾರಿಯಲ್ಲಿದೆಯೇ ಎನ್ನುವ ಟೀಕೆಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

    ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts