More

    ದೊಡ್ಡಪ್ಪನಾದ ಬಗ್ಗೆ ಕೃನಾಲ್​ ಪಾಂಡ್ಯ ಸಂಭ್ರಮಿಸಿದ್ದು ಹೇಗೆ ಗೊತ್ತೇ?

    ವಡೋದರ: ಪಾಂಡ್ಯ ಕುಟುಂಬ ಈಗ ಹೊಸ ಅತಿಥಿಯ ಆಗಮನದಿಂದ ಸಂಭ್ರಮದಲ್ಲಿ ತೇಲಾಡುತ್ತಿದೆ. ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅಪ್ಪನಾದ ಬಗ್ಗೆ ಸಂಭ್ರಮಿಸುತ್ತಿದ್ದರೆ, ಹಾರ್ದಿಕ್​ ಪಾಂಡ್ಯರ ಅಣ್ಣ ಕೃನಾಲ್​ ಪಾಂಡ್ಯ ದೊಡ್ಡಪ್ಪನಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

    ಹಾರ್ದಿಕ್​-ನತಾಶಾ ದಂಪತಿಯ ಮಗುವನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿರುವ ಕೃನಾಲ್​ ಪಾಂಡ್ಯ, ‘ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ನಾನೀಗ ಈ ಸುಂದರ ಗಂಡು ಮಗುವಿಗೆ ದೊಡ್ಡಪ್ಪನಾಗಿದ್ದೇನೆ. ಸಹೋದರ ಮತ್ತು ನತಾಶಾ ನಿಮಗೆ ಅಭಿನಂದನೆಗಳು. ಸಣ್ಣವನನ್ನೂ ದೊಡ್ಡಪ್ಪ ಪ್ರೀತಿಸುತ್ತಾರೆ’ ಎಂದು ಕೃನಾಲ್​ ಪಾಂಡ್ಯ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಬಿಕಿನಿ ಚಿತ್ರಗಳಿಗೆ ಟೀಕೆ, ದಿಟ್ಟ ತಿರುಗೇಟು ನೀಡಿದ ಟೆನಿಸ್​ ತಾರೆ ನವೊಮಿ ಒಸಾಕಾ

    ಸಹೋದರರಾದ ಹಾರ್ದಿಕ್​ ಪಾಂಡ್ಯ ಮತ್ತು ಕೃನಾಲ್​ ಪಾಂಡ್ಯ ಮುಂಬರುವ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅದರಲ್ಲೂ ಹಾರ್ದಿಕ್​ ಪಾಂಡ್ಯ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಟೆಸ್ಟ್​ ತಂಡಕ್ಕೂ ಆಯ್ಕೆಯಾದರೆ ಇನ್ನು 150 ದಿನಗಳಿಗೂ ಹೆಚ್ಚು ಕಾಲ ಮಗುವಿನಿಂದ ದೂರ ಉಳಿಯಬೇಕಾಗುತ್ತದೆ. ಕೃನಾಲ್​ ಪಾಂಡ್ಯ ಕೂಡ ಭಾರತ ತಂಡವನ್ನು ಟಿ20 ಕ್ರಿಕೆಟ್​ನಲ್ಲಿ ಪ್ರತಿನಿಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts