More

    ಟಾಲಿವುಡ್​ನಲ್ಲಿ ಕನ್ನಡತಿಯ ಸಂಚಲನ!; ರಶ್ಮಿಕಾಗೆ ಪೈಪೋಟಿ ಕೊಡಲಿದ್ದಾರೆಯೇ ಕೃತಿ ಶೆಟ್ಟಿ?

    ಸೋಷಿಯಲ್ ಮೀಡಿಯಾದಿಂದಾಗಿ ರಾತ್ರೋರಾತ್ರಿ ಸ್ಟಾರ್ ಪಟ್ಟಗಿಟ್ಟಿಸಿಕೊಂಡವರಿದ್ದಾರೆ. ಕಡಿಮೆ ಅವಧಿಯಲ್ಲಿಯೇ ರಾಷ್ಟ್ರವ್ಯಾಪಿ ಸೆನ್ಸೆಷನ್ ಸೃಷ್ಟಿಸಿದವರೂ ಇದ್ದಾರೆ. ಇದೀಗ ಅಂಥದ್ದೇ ಪಟ್ಟ ಕನ್ನಡತಿಗೂ ಸಿಕ್ಕಿದೆ. ಅದೂ ಪಕ್ಕದ ತೆಲುಗು ನಾಡಲ್ಲಿ! ಆ ನಟಿಯ ಹೆಸರು ಕೃತಿ ಶೆಟ್ಟಿ. ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೃತಿ ಶೆಟ್ಟಿ ಸದ್ಯದ ಸೆನ್ಸೆಷನ್. ತೆಲುಗಿನಲ್ಲಿ ಮಾಡಿದ್ದು ಒಂದೇ ಸಿನಿಮಾ ಆದರೂ, ಅವರ ನಗುವಿನಿಂದಲೇ ಎಲ್ಲರ ವಾಟ್ಸಾಪ್ ಮತ್ತು ಫೇಸ್​ಬುಕ್ ಸ್ಟೇಟಸ್​ಗಳಲ್ಲಿ ಕೃತಿ ಸ್ಥಾನ ಪಡೆದಿದ್ದಾರೆ. ಅವರ ಫೋಟೋಗಳು, ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಹಾಗಾದರೆ ಯಾರು ಈ ಕೃತಿ ಶೆಟ್ಟಿ? ಏನಿವರ ಹಿನ್ನೆಲೆ? ಇಲ್ಲಿದೆ ಮಾಹಿತಿ.

    ಕೃತಿ ಮೂಲತಃ ಮಂಗಳೂರಿನವರು. ವಯಸ್ಸು ಈಗಿನ್ನು 17. 2019ರಲ್ಲಿ ಬಾಲಿವುಡ್​ನಲ್ಲಿ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಈ ಚೆಲುವೆ, ‘ಉಪ್ಪೆನಾ’ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟರು. ಕಳೆದ ಫೆಬ್ರವರಿ 12ಕ್ಕೆ ತೆರೆಕಂಡಿದ್ದ ಈ ಸಿನಿಮಾ, ಬಾಕ್ಸ್​ಆಫೀಸ್​ನಲ್ಲಿ 75 ಕೋಟಿ ರೂ. ಕಲೆಕ್ಷನ್ ಮಾಡಿದೆ. ಯಾವಾಗ ‘ಉಪ್ಪೆನಾ’ ಸಿನಿಮಾ ಬಿಡುಗಡೆ ಆಯಿತೋ ಅಲ್ಲಿಂದ ಕೃತಿ ನಸೀಬೇ ಬದಲಾಗಿ ಬಿಟ್ಟಿತು. ಅದೇ ಯಶಸ್ಸಿನ ಏಣಿ ಹಿಡಿದ ಕೃತಿ, ಟಾಲಿವುಡ್ ಸ್ಟಾರ್ ನಟ ನಾಣಿ ಜತೆಗೆ ‘ಶ್ಯಾಮ್ ಸಿಂಗ ರಾಯ್’ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಆ ಅಮ್ಮಾಯಿ ಗುರುಂಚಿ ಮೀಕು ಚಪ್ಪಾಲಿ’ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ಜಾಹೀರಾತು ಕ್ಷೇತ್ರದಲ್ಲಿಯೂ ಕೃತಿ ಬಿಜಿಯಾಗಿದ್ದು, ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮುಂದೊಂದು ದಿನ ಟಾಲಿವುಡ್​ನಲ್ಲಿ ರಶ್ಮಿಕಾಗೆ ಕೃತಿ ಪೈಪೋಟಿ ಕೊಡುತ್ತಾರೆಯೇ? ವೇಯ್ಟ ಆಂಡ್ ಸೀ …

    ವಧು ವರರ ಬಟ್ಟೆ ಬಿಚ್ಚುವುದು ಇಲ್ಲಿನ ಸಂಪ್ರದಾಯ! ಈ ದೇಶದ ಯುವಜನತೆಗೆ ಮದುವೆಯೇ ಶಾಪವಂತೆ!

    ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts