More

    ಕೃತಿ ಮುಖದಲ್ಲಿ ಕೊನೆಗೂ ಮಂದಹಾಸ …

    ಕೃತಿ ಖರಬಂದ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣ, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕೃತಿಗೆ, ತಮಗೆ ಕರೊನಾ ಸೋಂಕು ತಗಲಿರಬಹುದು ಎಂದು ಭಯವಾಗಿದೆ. ಅದೇ ಭಯದಲ್ಲಿ ಟೆಸ್ಟ್ ಮಾಡಿಸಿದಾಗ, ನೆಗೆಟಿವ್ ಎಂಬ ವರದಿ ಬಂದಿದೆ. ಒಂದು ಹಂತದಲ್ಲಿ ತೀವ್ರ ಭಯಭೀತರಾಗಿದ್ದ ಕೃತಿ, ಈ ವಿಷಯ ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.

    ಕಳೆದ ತಿಂಗಳು ಕೃತಿ, ತಮ್ಮ ಬಾಯ್‌ಫ್ರೆಂಡ್ ಪುಲ್ಕಿತ್ ಸಹೋದರನ ಎಂಗೇಜ್‌ಮೆಂಟ್‌ಗೆಂದು ಮುಂಬೈನಿಂದ ದೆಹಲಿಗೆ ಹೋಗಿದ್ದಾರೆ. ಎಂಗೇಜ್‌ಮೆಂಟ್ ಮುಗಿಸಿ ವಾಪಸ್ಸು ಮುಂಬೈಗೆ ಬಂದಿದ್ದಾರೆ. ಅಲ್ಲಿಂದ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಯಿತಂತೆ. ವಿಪರೀತ ನೆಗಡಿ, ಕೆಮ್ಮು ಇತ್ತಂತೆ. ಅಷ್ಟರಲ್ಲಾಗಲೇ ಕರೊನಾ ಬಗ್ಗೆ ಸಾಕಷ್ಟು ಕೇಳಿದ್ದರಿಂದ, ಕೃತಿಗೆ ಸಹಜವಾಗಿ ಭಯವಾಗಿದೆ. ತಕ್ಷಣವೇ ಡಾಕ್ಟರ್‌ಗೆ ಫೋನ್ ಮಾಡಿದ್ದಾರೆ.

    ಅದಕ್ಕೆ ವೈದ್ಯರು, ‘ಎಲ್ಲರಿಂದ ದೂರ ಇದ್ದು ಬಿಡು’ ಎಂದರಂತೆ. ಕ್ರಮೇಣ ಕೃತಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡು, ವೈದ್ಯರು ಹೇಳಿದ ಔಷಧಿ ತೆಗೆದುಕೊಂಡಿದ್ದಾರೆ. ಕ್ರಮೇಣ ನೆಗಡಿ, ಕೆಮ್ಮು ತಹಬದಿಗೆ ಬಂತಂತೆ. ಆಗ ಕೃತಿಗೆ ತಮಗೆ ಸೋಂಕು ತಗುಲಿಲ್ಲ ಎಂದು ಮನವರಿಕೆಯಾಗಿದೆ. ಈಗ ಕೃತಿ ಆರೋಗ್ಯವಾಗಿರುವುದಷ್ಟೇ ಅಲ್ಲ, ಸಂತೋಷವಾಗಿಯೂ ಇದ್ದಾರೆ.
    ಅಂದಹಾಗೆ, ಅವರಿಗೆ ಈ ಸಮಯದಲ್ಲಿ ಸಹಾಯಕ್ಕೆ ನಿಂತಿದ್ದು ಬಾಯ್‌ಫ್ರೆಂಡ್ ಪುಲ್ಕಿತ್. ಪುಲ್ಕಿತ್ ಸಹ ತಮ್ಮ ಬಿಲ್ಡಿಂಗ್‌ನಲ್ಲೇ ಇರುವುದರಿಂದ, ಕೃತಿಗೆ ತೀರಾ ಒಂಟಿ ಎಂದನಿಸಲಿಲ್ಲವಂತೆ. ಅವರಿಲ್ಲದಿದ್ದರೆ ಬಹಳ ಕಷ್ಟ ಆಗುತ್ತಿತ್ತು ಎಂದು ಕೃತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಮಿಲನ ಜತೆ ಕೃಷ್ಣ ಡಿನ್ನರ್‌ಗೆ ಹೋಗಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts