More

    ಟೈಗರ್​ ಶ್ರಾಫ್​ ತಂಗಿ ಕರೊನಾ ಹಾವಳಿ ಮಧ್ಯೆ ಸಿಡ್ನಿಗೆ ಹಾರಿದ್ದು ಏಕೆ?

    ಟೈಗರ್​ ಶ್ರಾಫ್​ ತಂಗಿ ಕೃಷ್ಣಾ ಶ್ರಾಫ್​, ಬಾಲಿವುಡ್​ಗೆ ಎಂಟ್ರಿ ಕೊಡದಿರಬಹುದು. ಆದರೆ, ಸೆಲೆಬ್ರಿಟಿ ವಲಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ, ಆಕೆಯ ಬಿಂದಾಸ್​ ವರ್ತನೆ. ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಕೃಷ್ಣಾ, ಕರೊನಾ ಹಾವಳಿ ಮಧ್ಯೆ ಇದ್ದಕ್ಕಿದ್ದಂತೆ ಆಸ್ಟ್ರೇಲಿಯಾದ ಸಿಡ್ನಿಗೆ ಹಾರಿದ್ದಾರೆ.

    ಕರೊನಾ ಹಾವಳಿ ವಿಪರೀತವಿರುವಾಗ, ಎಲ್ಲರೂ ಮನೆಯಲ್ಲೇ ಇರಲು ಬಯಸುವಾಗ, ಕೃಷ್ಣಾ ಮಾತ್ರ ಮನೆ ಬಿಟ್ಟು ಸಿಡ್ನಿಗೆ ಹಾರಿದ್ದೇಕೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಕಾರಣ ಆಕೆಯ ಬಾಯ್​ಫ್ರೆಂಡ್​ ಎಬಾನ್​ ಹ್ಯಾಮ್ಸ್​. ಬ್ಯಾಸ್ಕೆಟ್​ ಬಾಲ್​ ಆಟಗಾರನಾಗಿರುವ ಎಬಾನ್​ನನ್ನು ನೋಡುವುದಕ್ಕೆ ಕೃಷ್ಣಾ ಇದೀಗ ಸಿಡ್ನಿಗೆ ಹೋಗಿದ್ದಾರೆ.

    ಇದನ್ನೂ ಓದಿ: ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್​ ಶೀಲ್ಡ್​ ಕೊಟ್ಟ ಸೋನು ಸೂದ್​

    ಕೃಷ್ಣಾ ಮತ್ತು ಎಬಾನ್​ ಹ್ಯಾಮ್ಸ್​ ಇಬ್ಬರೂ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಮೂಲತಃ ಪೂಣೆಯವರಾದ ಎಬಾನ್​, ಸದ್ಯಕ್ಕೆ ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಈ ವರ್ಷದ ಆರಂಭದಲ್ಲಿ ಯಾವುದೋ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಭಾರತಕ್ಕೆ ಬಂದಿದ್ದಾಗ, ಲಾಕ್​ಡೌನ್​ ಘೋಷಣೆಯಾಯಿತು. ವಾಪಸ್ಸು ಊರಿಗೆ ಹೋಗಲಿಕ್ಕಾಗದ ಎಬಾನ್​, ಸೀದಾ ಹೋಗಿ ಕೃಷ್ಣಾಾ ಮನೆಯಲ್ಲಿ ಸೇರಿಕೊಂಡರು.

    ಮೂರು ತಿಂಗಳ ಲಾಕ್​ಡೌನ್​ ಸಂದರ್ಭದಲ್ಲಿ ಕೃಷ್ಣಾ ಮತ್ತು ಎಬಾನ್​ ಪರಸ್ಪರ ಅಂಟಿಕೊಂಡೇ ಇದ್ದರು. ಸದಾ ಫೋಟೋಗಳನ್ನು ತೆಗೆದು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುವ ಮೂಲಕ ಇನ್ನಷ್ಟು ಜನಪ್ರಿಯರಾದರು. ಒಂದು ಹಂತದಲ್ಲಿ ಲಾಕ್​ಡೌನ್​ ಮುಗಿದು, ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭವಾದ ಮೇಲೆ, ಎಬಾನ್​ ವಾಪಸ್ಸು ಆಸ್ಟ್ರೇಲಿಯಾಗೆ ಹೊರಟು ಹೋದರು.

    ಇದನ್ನೂ ಓದಿ: ಅಲ್ಲು ಅರ್ಜುನ್​ ‘ಸರೈನೋಡು’ ಸಿನಿಮಾ ಸೃಷ್ಟಿಸಿದೆ ದಾಖಲೆ!; ಇದು ಯಾರೂ ಮಾಡದ ರೆಕಾರ್ಡ್​…

    ಎಬಾನ್​ ಏನೋ ಹೋಗಿ ತವರು ಸೇರಿಕೊಂಡರು. ಆದರೆ, ಕೃಷ್ಣಾಗೆ ಎಬಾನ್​ ಅವರನ್ನು ಬಿಟ್ಟು ಇರುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಅದೇ ಕಾರಣಕ್ಕೆ ಕರೊನಾ ಹಾವಳಿಯನ್ನೂ ಲೆಕ್ಕಿಸದೆ, ಇಷ್ಟಪಟ್ಟ ಹುಡುಗನ ಜತೆಗೆ ಇರುವುದಕ್ಕೆ ಕೃಷ್ಣಾ, ಆಸ್ಟ್ರೇಲಿಯಾಗೆ ಹಾರಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರುವ ಕೃಷ್ಣಾ, ವಿಮಾನದಿಂದಲೇ ಒಂದು ಫೋಟೋ ಶೇರ್​ ಮಾಡಿದ್ದಾರೆ.

    ಬಾಲಿವುಡ್​ನ ದೊಡ್ಡ ದೊಡ್ಡ ಹೆಸರುಗಳು ಸುಶಾಂತ್​ ಸಾವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts