More

    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ : ನದಿ ಪಾತ್ರದ ಜನರಲ್ಲಿ ಭೀತಿ

    ರಬಕವಿ/ಬನಹಟ್ಟಿ : ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಕಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕಷ್ಣೆ ಬುಧವಾರ ರಬಕವಿ-ಬನಹಟ್ಟಿ ಸಮೀಪದ ಮಹೀಷವಾಡಗಿ ಸೇತುವೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

    ಹಿಪ್ಪರಗಿ ಜಲಾಶಯದಲ್ಲಿ ಬುಧವಾರ 1.15 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ ಒಟ್ಟು 6 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 1.14 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

    ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಹಾಗೂ ಇನ್ನೀತರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಷ್ಣಾ ತಟದಲ್ಲಿರುವ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಗತರಾಗಿರಬೇಕು ಎಂದು ತಹಸೀಲ್ದಾರ ಎಸ್. ಬಿ. ಇಂಗಳೆ ತಿಳಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಬುಧವಾರ ಸಂಜೆಯಿಂದ ಸಂಚಾರ ಬಂದ್‌ಆಗಿದ್ದು ಜಮಖಂಡಿ-ಮೀರಜ್ ಬಸ್‌ಗಳು ಅಥಣಿ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿವೆ ಎಂದು ಜಮಖಂಡಿ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಸಂಗಮೇಶ ಮಠೋಳಿ ತಿಳಿಸಿದರು.

    ಕಷ್ಣೆಯ ಒಳಹರಿವು ಪ್ರತಿ ದಿನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಆದರೂ ಪ್ರವಾಹದ ಯಾವುದೇ ಭಯಬೇಡ. ಊಹಾಪೋಹಗಳಿಗೆ ಜನ ಕಿವಿಗೊಡಬಾರದು. ಪ್ರತಿ ದಿನ 3 ಲಕ್ಷ ಕ್ಯುಸೆಕ್ ನೀರಿನ ಮಟ್ಟ ಹೆಚ್ಚಾದಾಗ ಮಾತ್ರ ಸಮಸ್ಯೆಯಾಗುವುದು. ಆದಕಾರಣ ತಾಲೂಕು ಆಡಳಿತ ಈಗಾಗಲೇ ಪ್ರವಾಹ ಎದುರಿಸಲು ಎಲ್ಲ ಸಿದ್ಧತೆಮಾಡಿಕೊಂಡಿದೆ ಎಂದು ತಹಸೀಲ್ದಾರ ಎಸ್.ಬಿ. ಇಂಗಳೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts