More

    ಅಧ್ಯಕ್ಷರ ಪದಗ್ರಹಣಕ್ಕೆ ಕೆಪಿಸಿಸಿ ಭರದ ಸಿದ್ಧತೆ

    ಬೆಂಗಳೂರು: ಜು.2ರಂದು ನಡೆಯಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಭರದ ತಯಾರಿ ನಡೆದಿದ್ದು, ನೇರಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ 7,831 ಕಡೆ ವರ್ಚುವಲ್ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ. ಇದರ ಹೊರತು ಈವರೆಗೆ 1,000 ಹೆಚ್ಚುವರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಕೋರಿಕೆ ಬಂದಿವೆ. ಜತೆಗೆ, ನೇರಪ್ರಸಾರ ವೀಕ್ಷಣೆಗೆ ಲಿಂಕ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಪ್ರಮುಖ ನಾಯಕರೆಲ್ಲರೂ ವಿಡಿಯೋ ಸಂದೇಶದ ಮೂಲಕ ತಾವಿರುವ ಸ್ಥಳದ ಸಮೀಪ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

    ಇದೇ ವೇಳೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ 1 ಕೋಟಿ ಜನರಿಗೆ ಕಾರ್ಯಕ್ರಮದ ನೇರಪ್ರಸಾರವನ್ನು ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕ ನಟರಾಜ ಗೌಡ ಮಾಹಿತಿ ನೀಡಿದ್ದಾರೆ.ರಾಜ್ಯದ ಪ್ರಮುಖ 30 ನಾಯಕರ ಜಾಲತಾಣದ ಪೇಜ್​ಗಳಲ್ಲಿ ಕಾರ್ಯಕ್ರಮವನ್ನು ಲೈವ್ ಮಾಡಲಾಗುತ್ತದೆ. ಈಗಾಗಲೇ ಮಿಸ್​ಕಾಲ್ ಅಭಿಯಾನದ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದು, ಈವರೆಗೆ ಎರಡೂವರೆ ಲಕ್ಷ ಮಂದಿ ಮಿಸ್​ಕಾಲ್ ಕೊಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಂಖ್ಯೆ 3 ಲಕ್ಷ ಮುಟ್ಟುವ ಅಂದಾಜಿದೆ. ಅವರಿಗೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ನೇರಪ್ರಸಾರದ ಲಿಂಕ್ ಅನ್ನು ಎಸ್​ಎಂಎಸ್ ಮೂಲಕ ಕಳುಹಿಸಲಾಗುತ್ತದೆ. 2 ಲಕ್ಷ ವಾಟ್ಸ್​ಆಪ್ ನಂಬರ್​ಗಳಿಗೆ ಪ್ರಸಾರ ಮಾಡಲಾಗುತ್ತದೆ. ಒಟ್ಟಾರೆ ಒಂದು ಕೋಟಿ ಜನರಿಗೆ ವಿವಿಧ ಮಾಧ್ಯಮದ ಮೂಲಕ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕೆಂಬ ಗುರಿಹಾಕಿಕೊಳ್ಳ ಲಾಗಿದೆ ಎಂದು ನಟರಾಜ ಗೌಡ ಹೇಳಿದ್ದಾರೆ.

    ಇದನ್ನೂ ಓದಿ: ಮನೆ, ಆಸ್ಪತ್ರೆ ಬಳಕೆಗೆ ಬರಲಿದೆ ಆಮ್ಲಜನಕ ಪುಷ್ಟೀಕರಣ ಘಟಕ

    ಅನುಮತಿ ಪಡೆಯುವ ಅಗತ್ಯವಿಲ್ಲ: ಜುಲೈ 2ರಂದು ನಡೆಯಲಿರುವ ‘ಪ್ರತಿಜ್ಞಾ ದಿನ’ ಕಾರ್ಯಕ್ರಮಕ್ಕೆ ತಾವೆಲ್ಲ ಸಜ್ಜಾಗಿದ್ದೀರಿ, ಯಾವುದೇ ಪಂಚಾಯಿತಿ, ವಾರ್ಡ್, ಕ್ಷೇತ್ರಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂದೇಶ ಕಳುಹಿಸಿದ್ದಾರೆ. ವ್ಯಕ್ತಿಗತ ಅಂತರ ಕಾಯ್ದುಕೊಂಡು ಕಡಿಮೆ ಜನರು ಸೇರಿ ಕಾರ್ಯಕ್ರಮ ನಡೆಸಬಹುದು ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಿಮ್ಮನ್ನು ಭೇಟಿ ಮಾಡುತ್ತೇನೆ. ವ್ಯಕ್ತಿಗತ ಅಂತರ ಅಗತ್ಯವಿರುವುದರಿಂದ ತಾವೆಲ್ಲ ನೇರವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನಾವು ನೀಡಿರುವ ನಂಬರ್​ಗೆ ಮಿಸ್​ಕಾಲ್ ನೀಡಬೇಕು, ಅದೇ ನೀವು ನನಗೆ ಮಾಡುವ ಆಶೀರ್ವಾದ ಎಂದು ಹೇಳಿದ್ದಾರೆ.

    ಕ್ಯಾಮ್​ಸ್ಕ್ಯಾನರ್​ ಬ್ಯಾನ್ ಆಗಿದೆ, ಅದರ ಬದಲು ಬಳಸಬಹುದಾದ ಪರ್ಯಾಯ ಆ್ಯಪ್​ಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts