More

    ಕೆಪಿಸಿಸಿ ಅಧ್ಯಕ್ಷರ ಹೊಸ ವರಸೆ- ಫೋನ್ ಟ್ಯಾಪ್ ಆಗಿದ್ಯಂತೆ…

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ನಂತರದ ಬೆಳವಣಿಗೆಗಳು ಎಲ್ಲರ ಗಮನಸೆಳೆದಿದ್ದು, ಆರೋಪಿಗಳಿಗೆ ಯಾರ್ಯಾರ ಜತೆಗೆ ನಂಟಿದೆ ಎಂಬಿತ್ಯಾದಿ ಅಂಶಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ವಿಷಯದಲ್ಲಿ ಆರಂಭಿಕ ಹಂತದಲ್ಲಿ ಮೌನವಾಗಿದ್ದ ಕಾಂಗ್ರೆಸ್ಸಿಗರು, ಆನಂತರದಲ್ಲಿ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಫೋನ್ ಟ್ಯಾಪ್ ಆಗಿದೆ ಎಂಬ ಗಂಭೀರ ಆರೋಪವನ್ನು ಇಂದು ಮಾಡಿದ್ದಾರೆ. ಫೋನ್ ಟ್ಯಾಪ್ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೇನೆ. ನಿನ್ನೆಯಿಂದ ಕರೆಗಳೇ ಬರುತ್ತಿಲ್ಲ, ಹೋಗುತ್ತಿಲ್ಲ. ಶೇಕಡ 100 ರಷ್ಟು ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಶ್ರೀಶೈಲಂನಲ್ಲಿರುವ ತೆಲಂಗಾಣ ಪವರ್ ಸ್ಟೇಷನ್​ನಲ್ಲಿ ಭಾರಿ ಬೆಂಕಿ ದುರಂತ: 9 ಜನ ಸಿಲುಕಿರುವ ಶಂಕೆ

    ಈ ಬಗ್ಗೆ ಸಚಿವ ಆರ್ ಅಶೋಕ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಅವರು ಫೋನ್ ಟ್ಯಾಪ್​ ಬಗ್ಗೆ ಹೇಳಿದ್ದರು. ಹಾಲಿ ಗೃಹ ಸಚಿವ ಬೊಮ್ಮಾಯಿ ಅವರಿಗೆ ಫೋನ್ ಟ್ಯಾಪ್ ಮಾಡುವಂತಹ ಯಾವುದೇ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)

    ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಮಹಾ ವಿಸ್ಮಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts