More

    ರಾಜ್ಯ ಕಾಂಗ್ರೆಸ್​ನ ನೇತೃತ್ವ ವಹಿಸಿರುವವರೇ ರೌಡಿಶೀಟರ್; ಶೋಭಾ ಕರಂದ್ಲಾಜೆ ತಿರುಗೇಟು

    ಬೆಂಗಳೂರು: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರೌಡಿಶೀಟರ್ ಫೈಟರ್ ರವಿ ಭೇಟಿಯಾದ ಬಗ್ಗೆ ಕಾಂಗ್ರೆಸ್​​ನವರು ಟ್ರೋಲ್ ಮಾಡುವ ಅಗತ್ಯವೇನಿಲ್ಲ. ಪ್ರಧಾನಿ ಸ್ವಾಗತ ಹಾಗೂ ಲೈನಪ್​ಗೆ ಮಾತ್ರ ರವಿ ನಿಂತಿದ್ದರು. ಆದರೆ, ರಾಜ್ಯ ಕಾಂಗ್ರೆಸ್​ನ ನೇತೃತ್ವ ವಹಿಸಿರುವವರು ರೌಡಿಶೀಟರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ಬಿಜೆಪಿ ರಾಜ್ಯ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ರವಿ ಯಾರೆಂಬುದು ಪ್ರಧಾನಿಗೆ‌ ಗೊತ್ತಿಲ್ಲ. ಅಲ್ಲಿನ ಸ್ಥಳೀಯರ ಕಣ್ತಪ್ಪಿನಿಂದ ಸ್ವಾಗತ ಪಟ್ಟಿಯಲ್ಲಿ ಲೋಪವಾಗಿದೆ. ಸ್ವಾಗತ ಪಟ್ಟಿಯನ್ನು ಮೊದಲೇ ಪರಿಶೀಲಿಸಬೇಕಾಗಿತ್ತು. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸುತ್ತೇವೆ. ಚುನಾವಣೆ ಗಿಮಿಕ್​ಗಾಗಿ‌ ಕಾಂಗ್ರೆಸ್​ನವರು ಇದರಲ್ಲಿ ಹುಳುಕು ಹುಡುಕುವುದು ಬೇಡ. ಆ ಪಕ್ಷದಲ್ಲಿ ಎಷ್ಟು ಜನ ರೌಡಿಶೀಟರ್​​ಗಳಿದ್ದಾರೆ ಎನ್ನುವುದನ್ನು ನೋಡಿಕೊಳ್ಳಲಿ. ಈ ಬಗ್ಗೆ ಟೀಕಿಸುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲವೆಂದು ಶೋಭಾ‌ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ಪ್ರಧಾನಿ ಸ್ವಾಗತದಲ್ಲಿ ಫೈಟರ್ ರವಿ ನಿಂತ ಜವಾಬ್ದಾರಿ ನಮ್ಮದು. ಈ ಲೋಪವನ್ನು ಒಪ್ಪಿಕೊಳ್ಳುತ್ತೇವೆ. ರೌಡಿಶೀಟರ್​ಗಳನ್ನು ಪಕ್ಷದಲ್ಲಿ ತುಂಬಿಕೊಂಡಿರುವ ಕಾಂಗ್ರೆಸ್ ಗಿಮಿಕ್​ಗೆ ಜನರೇ ತಕ್ಕಪಾಠ‌ ಕಲಿಸುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆ. ಪ್ರಧಾನಿಗೆ ದೊರೆತ ಭರ್ಜರಿ ಸ್ವಾಗತ, ನೆರೆದ ಭಾರಿ ಜನಸ್ತೋಮದಿಂದ ಪಕ್ಷದಲ್ಲಿ ಉತ್ಸಾಹ ಹೆಚ್ಚಾಗಿರುವುದು ಸಹಜವೆಂದರು.

    ಸೋಮಣ್ಣ ನಮ್ಮೊಂದಿಗೆ ಇದ್ದಾರೆ

    ಸಚಿವ ವಿ.ಸೋಮಣ್ಣ ನಮ್ಮೊಂದಿಗೆ ಇದ್ದಾರೆ. ನಮ್ಮ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಚಾಲನೆ, ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಅಸಮಾಧಾನ, ಬೇಸರವಿಲ್ಲ. ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದಾರೆ ಆದರೂ ಸೋಮಣ್ಣ ಅವರಿಗೆ ಸ್ಥಾನಮಾನ ನೀಡಲಾಗಿದೆ. ಚುನಾವಣೆಯಲ್ಲಿ ಸೋತಾಗಲೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts