More

    ಪಕ್ಷ ಬಿಟ್ಟು ಹೋದವರನ್ನು ಮರಳಿ ‘ಮನೆಗೆ’ ಕರೆತರಲು ಸಮಿತಿ ರಚಿಸಿದ ಕಾಂಗ್ರೆಸ್!

    ಬೆಂಗಳೂರು: ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಹೋಗಿರುವ ಅನೇಕ ನಾಯಕರು ಮತ್ತೆ ಕಾಂಗ್ರೆಸ್‌ಗೆ ಮರಳಲು ಇಚ್ಛಿಸಿದ್ದಾರೆ. ಇವರನ್ನು ಸೇರಿಸಿಕೊಳ್ಳುವ ಕುರಿತು ಪರಾಮರ್ಶೆ ನಡೆಸಿ ಶಿಾರಸು ಮಾಡಲು ಅಲ್ಲಂ ವಿರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

    ಕೇವಲ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮರಳುವವರ ಅಗತ್ಯ ನಮಗಿಲ್ಲ. ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವದ ಮೇಲೆ ನಂಬಿಕೆ ಇಟ್ಟು, ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಲು ಸಿದ್ಧವಿದ್ದರೆ ಸೇರಿಸಿಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

    ಇದನ್ನೂ ಓದಿ ಬಿಎಸ್​ವೈ ಈ ಕೆಲಸ ಮಾಡಲಿಲ್ಲ ಅಂದ್ರೆ ಬದುಕಿದ್ದೂ ಸತ್ತಂತೆ: ಡಿ.ಕೆ.ಶಿವಕುಮಾರ್​

    ಷರತ್ತಿಲ್ಲದೆ ಕಾಂಗ್ರೆಸ್ ಜತೆ ಕೈಜೋಡಿಸಲು ಇಚ್ಛಿಸುವವರಲ್ಲಿ ಕೆಲವರು ಅರ್ಜಿ ಕೊಟ್ಟಿದ್ದು, ಈ ಅರ್ಜಿ ಸುದೀರ್ಘ ಸಮಯದಿಂದ ಹಾಗೇ ಉಳಿದಿದೆ. ಅವುಗಳನ್ನು ಸಮಿತಿಗೆ ನೀಡಿದ್ದೇನೆ ಎಂದು ಹೇಳಿದರು.

    ಸಮಿತಿಯಲ್ಲಿ ಬಿ.ಎ.ಹಸನಬ್ಬಗೆ ಸಂಚಾಲಕರಾಗಿದ್ದರೆ, ವಿ.ಮುನಿಯಪ್ಪ, ಅಜಯ್‌ಕುಮಾರ್ ಸರ್ ನಾಯಕ್, ಅಭಯಚಂದ್ರ, ಧ್ರುವನಾರಾಯಣ್, ಬಿ.ಎನ್.ಚಂದ್ರಪ್ಪ, ವಿ.ವೈ ೋರ್ಪಡೆ, ಸಂಪತ್‌ರಾಜ್, ಸತೀಶ್ ಸೈಲ್, ಕೃಪಾ ಆಳ್ವಾ, ಪ್ರುಲ್ಲಾ ಮಧುಕರ್ ಸದಸ್ಯರಾಗಿದ್ದಾರೆ.

    ಇದನ್ನೂ ಓದಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ‘ನಾನು ಗಾಂಧಾರಿ’ ಎಂದ್ರು ಡಿ.ಕೆ.ಶಿವಕುಮಾರ್​

    ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts