More

    ಬಿಜೆಪಿ ಗ್ಯಾರಂಟಿಗಳ ವಿರೋಧಿ

    ಚಿತ್ರದುರ್ಗ: ರಾಜ್ಯದ ಐದು ಗ್ಯಾರಂಟಿ ವಿರೋಧಿಸುತ್ತಿರುವ ಬಿಜೆಪಿಗರ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳ ಸಮುದಾಯಗಳಿಗೆ ಶಿಕ್ಷಣ, ಆಹಾರ ಭದ್ರತೆ, ಆರ್ಥಿಕವಾಗಿ ಮೇಲೆತ್ತುವುದು ಸಂವಿಧಾನದ ಆಶಯ. ಆದರೆ, ಅದನ್ನೇ ಬದಲಿಸುವ ಮೂಲಕ ಸೌಲಭ್ಯಗಳ ಅನುಷ್ಠಾನಕ್ಕೆ ಬಿಜೆಪಿ ಕುತ್ತು ತರುವ ಆತಂಕ ಸಮುದಾಯಗಳಲ್ಲಿದೆ. ಕಮಲ ಪಡೆ ಎಷ್ಟೇ ಪ್ರಯತ್ನಿಸಿದರೂ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಪಂಚ ಗ್ಯಾರಂಟಿ ನಿಲ್ಲದು ಎಂದರು.

    ಕೇಂದ್ರದಲ್ಲಿರುವುದು ಭಾರತ ಸರ್ಕಾರವಲ್ಲ. ನಿತ್ಯ 2,600 ಕೋಟಿ ರೂ. ಆದಾಯ ಗಳಿಸುತ್ತಿರುವ ಅದಾನಿ, ಅಂಬಾನಿ ಸರ್ಕಾರ. ಪ್ರತಿದಿನ ಕೇವಲ 75 ರೂ. ಗಳಿಸುವ ಸಾಮಾನ್ಯ ಜನರ ನೋವು ಅವರಿಗೆ ಗೊತ್ತಿಲ್ಲ. ಕಳೆದ 10 ವರ್ಷದಲ್ಲಿ ಬಡವರಿಗೆ ಬಿಜೆಪಿ ಯಾವ ಕೊಡುಗೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

    ತುಮಕೂರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷ ಕಾಡುಗೊಲ್ಲರಿದ್ದಾರೆ. ಹೀಗಾಗಿ 24ರಂದು ತುಮಕೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಮಾವೇಶಕ್ಕೆ ಮುಂದಾಗಿದ್ದು, ಅದು ಕಾಡುಗೊಲ್ಲರ ಕಾರ್ಯಕ್ರಮವಲ್ಲ. ಈ ಸಮುದಾಯವನ್ನು ಎಸ್ಟಿಗೆ ಸೇರಿಸುವುದಾಗಿ ಭರವಸೆ ನೀಡಿ, 10 ವರ್ಷವಾದರೂ ಈಡೇರಿಸದ ವಂಚಿತರ ಸಮಾವೇಶ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಚಮನ್‌ ಫರ್ದಾನ್‌, ಕೆ.ಎಂ.ಹಾಲಸ್ವಾಮಿ, ಬಾಲಕೃಷ್ಣಸ್ವಾಮಿ, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಎನ್‌.ಡಿ.ಕುಮಾರ್‌ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts